ಶಿವತಾಂಡವ ನೃತ್ಯ ಪ್ರದರ್ಶನ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಕಲಾವಿದ ಸಾವು! ವಿಡಿಯೋ ವೈರಲ್
ಶಿವ ತಾಂಡವ ನೃತ್ಯ ಪ್ರದರ್ಶನ ವೇಳೆ ಪಾರ್ವತಿ ಪಾತ್ರದಾರಿ ಕಲಾವಿದ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಮ್ಮು ನಗರದ ಹೊರವಲಯದಲ್ಲಿ ನಡೆದಿದೆ. ಅವರ ಕೊನೆಯ ಕ್ಷಣಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜಮ್ಮು: ಶಿವ ತಾಂಡವ ನೃತ್ಯ ಪ್ರದರ್ಶನ ವೇಳೆ ಪಾರ್ವತಿ ಪಾತ್ರದಾರಿ ಕಲಾವಿದ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಮ್ಮು ನಗರದ ಹೊರವಲಯದಲ್ಲಿ ನಡೆದಿದೆ. ಅವರ ಕೊನೆಯ ಕ್ಷಣಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಷ್ನಾ ತೆಹಿಲ್‌ನ ಕೋಥಾ ಸೋನಿಯಾ ಕುಗ್ರಾಮದಲ್ಲಿ ಮಂಗಳವಾರ ರಾತ್ರಿ ಜಾಗರಣೆ ಸಂದರ್ಭದಲ್ಲಿ ಶಿವ ತಾಂಡವ ಪ್ರದರ್ಶನದ ವೇಳೆ 20 ವರ್ಷದ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಿದ್ದಂತೆಯೇ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರೇಕ್ಷಕರ ಚಪ್ಪಾಳೆ ನಡುವೆ ನೃತ್ಯ ಪ್ರದರ್ಶಿಸುತ್ತಿದ್ದ ಯೋಗೇಶ್ ವೇದಿಕೆ ಮೇಲೆ ಬಿದಿದ್ದು, ಮತ್ತೆ ಮೇಲೇಳಲು ಸಾಧ್ಯವಾಗಿಲ್ಲ. ತೀವ್ರ ಪ್ರಯತ್ನದ ಹೊರತಾಗಿಯೂ ಅವರು ಎದ್ದೇಳಲು ವಿಫಲರಾದ ಕಾರಣ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಮತ್ತಿತರರು ವೇದಿಕೆಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಯೋಗೇಶ್ ಅಂತಿಮ ಕ್ಷಣವನ್ನು ಹಲವು ವೀಕ್ಷಕರು ತಮ್ಮ ಕ್ಯಾಮೆರಾದಲ್ಲಿ ಲೈವ್ ಮಾಡಿದ್ದಾರೆ ಮತ್ತು ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


