120 ಕೋಟಿ ರೂ. ಮೌಲ್ಯದ ಡ್ರಗ್ಸ್ ಪ್ರಕರಣ: ಮಾಜಿ ಏರ್ ಇಂಡಿಯಾ ಪೈಲಟ್ ಸೇರಿ 6 ಮಂದಿ ಬಂಧನ!
ಮುಂಬೈ ನ ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ (ಎನ್ ಸಿಬಿ) ಸುಮಾರು 120 ಕೋಟಿ ರೂಪಾಯಿ ಮೌಲ್ಯದ 60 ಕೆ.ಜಿಯಷ್ಟು ಮೆಫೆಡ್ರೋನ್ ಡ್ರಗ್ ನ್ನು ವಶಕ್ಕೆ ಪಡೆದಿರುವ ಪ್ರಕರಣದಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ಕೂಡ ಶಾಮೀಲಾಗಿದ್ದಾರೆ.

ನವದೆಹಲಿ: ಮುಂಬೈ ನ ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ (ಎನ್ ಸಿಬಿ) ಸುಮಾರು 120 ಕೋಟಿ ರೂಪಾಯಿ ಮೌಲ್ಯದ 60 ಕೆ.ಜಿಯಷ್ಟು ಮೆಫೆಡ್ರೋನ್ ಡ್ರಗ್ ನ್ನು ವಶಕ್ಕೆ ಪಡೆದಿರುವ ಪ್ರಕರಣದಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ಕೂಡ ಶಾಮೀಲಾಗಿದ್ದಾರೆ.
ಮುಂಬೈ ಮತ್ತು ಗುಜರಾತ್ ಗಳಲ್ಲಿ ಈ ಡ್ರಗ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಜಾಲದ ಕಿಂಗ್ ಪಿನ್ ನ್ನು ಸೋಹೈಲ್ ಗಫಾರ್ ಮಹಿದಾ, ಏರ್ ಇಂಡಿಯಾದ ಮಾಜಿ ಪೈಲಟ್ ಹಾಗೂ ಮಿತಿ ಪಿಚೈದಾಸ್ ಎಂದು ಗುರುತಿಸಲಾಗಿದ್ದು, (ಕಂದಾಯ ಗುಪ್ತಚರ ನಿರ್ದೇಶನಾಲಯ) ಡಿಆರ್ ಐ ಬಂಧನಕ್ಕೊಳಪಡಿಸಿದೆ.
ಇದನ್ನೂ ಓದಿ: ಪಂಜಾಬ್: ಹಾದಿ ತಪ್ಪಿದ ಯುವಜನತೆ; ಡ್ರಗ್ಸ್ ಪ್ರಭಾವದಿಂದಾಗಿ ರಸ್ತೆಯಲ್ಲಿ ನಡೆಯಲಾಗದೇ ಹೆಣಗಾಡಿದ ಯುವಕ - ವಿಡಿಯೋ
ಸೋಹಾಲಿ ಗಫಾರ್ ಮಹಿದಾ 2016-2018 ವರೆಗೆ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯಕೀಯ ಕಾರಣದಿಂದಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
ತಮಗೆ ಲಭ್ಯವಾದ ಸುಳಿವಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ್ದ ಎನ್ ಸಿಬಿ 50 ಕೆಜಿಗಳಷ್ಟು ಎಂಡಿ ಡ್ರಗ್ಸ್ ನ್ನು ಮುಂಬೈ ನ ಗೋದಾಮಿನಿಂದ ವಶಕ್ಕೆ ಪಡೆದಿದ್ದರು. ಅ.03 ರಂದು ಎನ್ ಸಿಬಿಯ ಮುಂಬೈ ವಿಭಾಗೀಯ ಘಟಕ, ದಾಳಿ ನಡೆಸಿ, ಜಾಮ್ ನಗರದಲ್ಲಿ 10 ಕೆ.ಜಿಯಷ್ಟು ಮೆಫೆಡ್ರೋನ್ ನ್ನು ವಶಕ್ಕೆ ಪಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


