ಇಶಾ ಅಂಬಾನಿ, ಆನಂದ್ ಪಿರಮಾಲ್ ದಂಪತಿಗೆ ಅವಳಿ ಮಕ್ಕಳು ಜನನ
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತುಆನಂದ್ ಪಿರಮಾಲ್ ದಂಪತಿಗೆ ಅವಳಿ ಮಕ್ಕಳು ಜನಿಸಿವೆ ಎಂದು ಅಂಬಾನಿ ಕುಟುಂಬ ಭಾನುವಾರ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.

ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ದಂಪತಿಗೆ ಅವಳಿ ಮಕ್ಕಳು ಜನಿಸಿವೆ ಎಂದು ಅಂಬಾನಿ ಕುಟುಂಬ ಭಾನುವಾರ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.
ನವೆಂಬರ್ 19 ರಂದು ಇಶಾ ಅಂಬಾನಿ ಅವರು ಹೆಣ್ಣು ಮತ್ತು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮಾಹಿತಿ ನೀಡಿದೆ.
"ನಮ್ಮ ಮಕ್ಕಳಾದ ಇಶಾ ಮತ್ತು ಆನಂದ್ ದಂಪತಿಗೆ ನವೆಂಬರ್ 19 ರಂದು ದೇವರು ಅವಳಿ ಮಕ್ಕಳನ್ನು ಕರುಣಿಸಿದ್ದಾನೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಇಶಾ ಮತ್ತು ಮಕ್ಕಳು, ಹೆಣ್ಣು ಮಗು ಆದಿಯಾ ಮತ್ತು ಮಗು ಮಗು ಕೃಷ್ಣ ಎಲ್ಲರೂ ಆರೋಗ್ಯವಾಗಿದ್ದಾರೆ. ಜೀವನದ ಈ ಪ್ರಮುಖ ಘಟ್ಟದಲ್ಲಿರುವ ಆದಿಯಾ, ಕೃಷ್ಣ, ಇಶಾ ಮತ್ತು ಆನಂದ್ ಅವರಿಗೆ ನಾವು ನಿಮ್ಮ ಆಶೀರ್ವಾದ ಶುಭ ಹಾರೈಕೆಗಳನ್ನು ಬಯಸುತ್ತೇವೆ" ಎಂದು ಅಂಬಾನಿ ಕುಟುಂಬ ಪ್ರಕಟಣೆಯಲ್ಲಿ ತಿಳಿಸಿದೆ.
ಇಶಾ ಅಂಬಾನಿ ಅವರು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಪಿರಮಲ್ ಗ್ರೂಪ್ ಸಂಸ್ಥಾಪಕ ಅಜಯ್ ಪಿರಾಮಲ್ ಮತ್ತು ಸ್ವಾತಿ ಅವರ ಪುತ್ರ ಆನಂದ್ ಪಿರಾಮಲ್ ಅವರೊಂದಿಗೆ ಡಿಸೆಂಬರ್ 12, 2018 ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


