ದೇಶ

ನವದೆಹಲಿ: ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿ ಸುಲಿಗೆ, 9 ಜನರ ಖತರ್ನಾಕ್ ಗ್ಯಾಂಗ್ ಬಂಧನ

ನಕಲಿ ಇಡಿ ಸಮನ್ಸ್‌ ಸೃಷ್ಟಿಸಿ ಉದ್ಯಮಿಯನ್ನು ಸುಲಿಗೆ ಮಾಡುತ್ತಿದ್ದ ಅಸ್ಸಾಂ ರೈಫಲ್ಸ್ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಒಂಬತ್ತು ಜನರ ಖತರ್ನಾಕ್ ಗ್ಯಾಂಗ್ ನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ.

ನವದೆಹಲಿ: ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿ ಸುಲಿಗೆ, 9 ಜನರ ಖತರ್ನಾಕ್ ಗ್ಯಾಂಗ್ ಬಂಧನ
9 ಜನರ ಖತರ್ನಾಕ್ ಗ್ಯಾಂಗ್ ಬಂಧನ
Published On :

ನವದೆಹಲಿ: ನಕಲಿ ಇಡಿ ಸಮನ್ಸ್‌ ಸೃಷ್ಟಿಸಿ ಉದ್ಯಮಿಯನ್ನು ಸುಲಿಗೆ ಮಾಡುತ್ತಿದ್ದ ಅಸ್ಸಾಂ ರೈಫಲ್ಸ್ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಒಂಬತ್ತು ಜನರ ಖತರ್ನಾಕ್ ಗ್ಯಾಂಗ್ ನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ. ದೆಹಲಿ ಮೂಲದ ವಕೀಲ ಸೇರಿದಂತೆ ಇನ್ನೂ ಕೆಲವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ರವೀಂದ್ರ ಯಾದವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು, ಹಣವನ್ನು ಸುಲಿಗೆ ಮಾಡಲು ಮುಖ್ಯ ಆರೋಪಿಯು ತಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ನಕಲಿ ಇಡಿ ಸಮನ್ಸ್ ಸೃಷ್ಟಿಸುವ ಮೂಲಕ ಭಯ ಸೃಷ್ಟಿಸಿದ್ದ ಮತ್ತು ಇಡಿ ಅಧಿಕಾರಿಗಳಂತೆ ನಟಿಸುತ್ತಿದ್ದ ವ್ಯಕ್ತಿಗಳು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದ ಎಂದು ಅವರು ಮಾಹಿತಿ ನೀಡಿದರು.

ಈ ಸಂಬಂಧ 9 ವ್ಯಕ್ತಿಗಳ ಗ್ಯಾಂಗ್ ಬಂಧಿಸಲಾಗಿದೆ. ಶೀಘ್ರದಲ್ಲೇ ಇತರರನ್ನು ಬಂಧಿಸಲಾಗುವುದು ಎಂದು ರವೀಂದ್ರ ಯಾದವ್ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.