ದೇಶ

2009ರ ಜೋಡಿ ಕೊಲೆ ಪ್ರಕರಣ: ಭೂಗತಪಾತಕಿ ಛೋಟಾ ರಾಜನ್ ಖುಲಾಸೆ

2009ರ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

2009ರ ಜೋಡಿ ಕೊಲೆ ಪ್ರಕರಣ: ಭೂಗತಪಾತಕಿ ಛೋಟಾ ರಾಜನ್ ಖುಲಾಸೆ
ಭೂಗತ ಪಾತಕಿ ಛೋಟಾ ರಾಜನ್
Published On :

ಮುಂಬೈ: 2009ರ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

ವಿಶೇಷ ನ್ಯಾಯಾಧೀಶ ಎಎಂ ಪಾಟೀಲ್ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಖುಲಾಸೆಗೊಳಿಸಿದರು. ರಾಜನ್‌ಗೆ ಸಂಬಂಧಿಸಿದ ಪಿತೂರಿಯನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅವರು ಹೇಳಿದರು.ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಮೊಹಮ್ಮದ್ ಅಲಿ ಶೇಖ್, ಉಮೇದ್ ಶೇಖ್ ಮತ್ತು ಪ್ರಣಯ್ ರಾಣೆ ಅವರನ್ನು ಖುಲಾಸೆಗೊಳಿಸಲಾಗಿದೆ.

2009 ಜುಲೈನಲ್ಲಿ  ದಕ್ಷಿಣ ಮುಂಬೈನ ನಾಗ್ಪಾಡಾ ಪ್ರದೇಶದ ಫುಟ್‌ಪಾತ್‌ನಲ್ಲಿ ಮತ್ತೊಂದು ಗುಂಪಿನ ಸಹೀದ್ ಗುಲಾಮ್ ಹುಸೇನ್ ಆಲಿಯಾಸ್ ಛೋಟೆ ಮಿಯಾನ್ ಮೇಲೆ ಗುಂಡು ಹಾರಿಸಲಾಗಿತ್ತು. ಅಲ್ಲಿಂದ ಪರಾರಿಯಾಗುತ್ತಿದ್ದಾಗ ಇತರ ಮೂವರ ಮೇಲೆ ದಾಳಿಕೋರರರು ಗುಂಡಿನ ದಾಳಿ ನಡೆಸಿದ್ದರು. ಆಗ ಛೋಟೆ ಮಿಯಾನ್ ಮತ್ತು ಸಯೀದ್ ಅರ್ಷದ್ ಗಾಯಗೊಂಡು ಸಾವನ್ನಪ್ಪಿದ್ದರು.

ಈ ಹತ್ಯೆ ಪ್ರಕರಣದ ಸಂಚಿನ ಆರೋಪನ್ನು ಛೋಟಾ ರಾಜನ್ ಮೇಲೆ ಹೊರಿಸಲಾಗಿತ್ತು.  ರಾಜನ್, ಇನ್ನೂ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಕಾರಣ ಜೈಲಿನಿಂದ ಹೊರಬರುವುದಿಲ್ಲ. ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಈತನಿಗೆ ಶಿಕ್ಷೆಯಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.