ಪೂರ್ವಜರು, ಸಂಸ್ಕೃತಿ, ಸಂಪ್ರದಾಯ ಪರಿಗಣಿಸಿದರೆ ಭಾರತದಲ್ಲಿರುವ ಶೇ 99ರಷ್ಟು ಮುಸಲ್ಮಾನರು ‘ಹಿಂದೂಸ್ತಾನಿ’ಗಳೇ!
ಭಾರತದ ಶೇ.99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ “ಹಿಂದೂಸ್ಥಾನಿ” ಆಗಿದ್ದಾರೆ ಎಂದು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಭಾನುವಾರ ಹೇಳಿಕೆ ನೀಡಿದ್ದಾರೆ.

ಥಾಣೆ: ಭಾರತದ ಶೇ.99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ “ಹಿಂದೂಸ್ಥಾನಿ” ಆಗಿದ್ದಾರೆ ಎಂದು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಥಾಣೆ ಜಿಲ್ಲೆಯ ಉತ್ತಾನ್ನಲ್ಲಿರುವ ರಾಂಭೌ ಮಲ್ಗಿ ಪ್ರಬೋಧಿನಿಯಲ್ಲಿ ಆರ್ಎಸ್ಎಸ್ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ಕಾರ್ಯಕರ್ತರ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಇಂದ್ರಕುಮಾರ್ ಮಾತನಾಡಿದ ಅವರು, ಭಾರತೀಯರಿಗೆ ಸಾಮಾನ್ಯ ಪೂರ್ವಜರಿದ್ದಾರೆ, ಆದ್ದರಿಂದ ಅವರ ಡಿಎನ್ಎ ಸಾಮಾನ್ಯವಾಗಿದೆ ಎಂದು ಈ ಹಿಂದೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅವರು ಬೆಂಬಲಿಸಿದರು.
ಪವಿತ್ರ ಕುರಾನ್ನ ನಿರ್ದೇಶನಗಳು ಮತ್ತು ತತ್ವಗಳ ಪ್ರಕಾರ ನಾವು ನಮ್ಮ ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯವನ್ನು ಸರ್ವೋಚ್ಚ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಬೇಕು ಎಂದು ಕುಮಾರ್ ಉಲ್ಲೇಖಿಸಿದ್ದಾರೆ.
‘ಇಂದ್ರೇಶ್ ಕುಮಾರ್ ಅವರು ಸಮಾನ ಡಿಎನ್ಎ ಕುರಿತ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ಇದರಲ್ಲಿ ‘ಡಿ’ ಎಂಬುದು ಕನಸು (ಡ್ರೀಮ್ಸ್), ‘ಎನ್’ –ರಾಷ್ಟ್ರ (ನೇಷನ್) ‘ಎ‘ –ಪೂರ್ವಜರನ್ನು (ಆನ್ಸೆಸ್ಟರ್ಸ್) ಬಿಂಬಿಸಲಿದೆ ಎಂದರು’ ಎಂದು ಹೇಳಿಕೆ ತಿಳಿಸಿದೆ.
‘ನಮ್ಮ ಪೂರ್ವಜರು ಸಮಾನರೇ ಆಗಿದ್ದಾರೆ. ಮೂಲವೂ ಒಂದೇ ರಾಷ್ಟ್ರವಾಗಿದೆ. ಹೀಗಾಗಿ, ನಮ್ಮ ಡಿಎನ್ಎ ಕೂಡಾ ಒಂದೇ ಆಗಿದೆ’ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಆಗಿರುವ ಇಂದ್ರೇಶ್ ಕುಮಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


