ಮೂಸೆವಾಲ ಹತ್ಯೆಗೆ ಗಡಿಯಾಚೆಯಿಂದ ಮಾರಕಾಸ್ತ್ರಗಳ ಪೂರೈಕೆ!
ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಕೊಲೆಗಡುಕರ ಕೈಗೆ ಸೇರಿದ್ದು ಗಡಿಯಾಚೆಯಿಂದ ಎಂಬ ಅಂಶ ದೆಹಲಿ ಪೊಲೀಸರ ಗಮನಕ್ಕೆ ಬಂದಿದೆ.

ದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಕೊಲೆಗಡುಕರ ಕೈಗೆ ಸೇರಿದ್ದು ಗಡಿಯಾಚೆಯಿಂದ ಎಂಬ ಅಂಶ ದೆಹಲಿ ಪೊಲೀಸರ ಗಮನಕ್ಕೆ ಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಸೋಮವಾರದಂದು ಇಬ್ಬರು ಪ್ರಮುಖ ಶೂಟರ್ ಗಳೂ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಇದೇ ದಿನದಂದು ಕೋರ್ಟ್ ಮೂವರನ್ನೂ 14 ದಿನಗಳ ಕಾಲ ವಿಶೇಷ ಸೆಲ್ ವಶಕ್ಕೆ ನೀಡಿ ಆದೇಶಿಸಿತ್ತು.
ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಗಡಿಯಾಚೆಯಿಂದ ಪೂರೈಕೆಯಾಗಿತ್ತು ಎಂಬ ಮಾಹಿತಿಯನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 50 ಸುತ್ತಿನ 8 ಅತ್ಯಾಧುನಿಕ ಸ್ಫೋಟಕ ಗ್ರೆನೇಡ್ ಗಳು ಹಾಗೂ ಗ್ರೆನೇಡ್ ಲಾಂಚರ್ ಗಳು, 9 ಎಲೆಕ್ಟ್ರಿಕ್ ಡೆಟೋನೇಟರ್ ಗಳನ್ನು ವಶಕ್ಕೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


