ಕೇರಳ: ಜೀವದ ಹಂಗು ತೊರೆದು ಶಸ್ತ್ರಸಜ್ಜಿತ ದಾಳಿಕೋರರನ್ನು ಹಿಡಿದ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್!
ಶಸ್ತ್ರಸಜ್ಜಿತವಾದ ದಾಳಿಕೋರನನ್ನು ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ.

ತಿರುವನಂತಪುರಂ: ಶಸ್ತ್ರಸಜ್ಜಿತವಾದ ದಾಳಿಕೋರನನ್ನು ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ವಾಹನವು ಆರೋಪಿಯ ಪಕ್ಕದಲ್ಲಿ ಬಂದು ನಿಲ್ಲುತ್ತಿದ್ದಂತೆ ಆತ ತನ್ನ ವಾಹನದಿಂದ ಮಚ್ಚು ಹಿಡಿದು ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಲು ಸಜ್ಜಾದನು. ಆದಾಗ್ಯೂ, ಸಬ್ ಇನ್ಸ್ ಪೆಕ್ಟರ್ ವೀರಾವೇಶದಿಂದ ದಾಳಿಕೋರನ ವಿರುದ್ಧ ಹೋರಾಡುತ್ತಾರೆ. ಅವನನ್ನು ನೆಲಕ್ಕೆ ಬೀಳಿಸುವ ಮೂಲಕ ಅವನನ್ನು ವಶಕ್ಕೆ ಪಡೆಯುತ್ತಾರೆ. ದಾರಿಹೋಕರು ಘಟನಾ ಸ್ಥಳಕ್ಕೆ ಧಾವಿಸಿ ಅಧಿಕಾರಿಗೆ ಸಹಾಯ ಮಾಡುತ್ತಾರೆ.
ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸ್ವಾತಿ ಲಾಕ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಿಜವಾದ ಹೀರೋ ಹೇಗಿರುತ್ತಾರೆ… ಕೇರಳದ ಈ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗೆ ವಂದನೆಗಳು.” ಎಂದು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸ್ ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಕೇರಳ ಪೊಲೀಸರ ಫೇಸ್‌ಬುಕ್ ಪೋಸ್ಟ್ ಪ್ರಕಾರ ಅಧಿಕಾರಿಯನ್ನು ಆಲಪ್ಪುಳ ನೂರನಾಡ್ ಪೊಲೀಸ್ ಠಾಣೆಯಲ್ಲಿ ಪ್ರಭಾರಿಯಾಗಿರುವ ಸಬ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಜೂನ್ 12 ರಂದು ಸಂಜೆ 6 ಗಂಟೆಗೆ ಪ್ಯಾರಾ ಜಂಕ್ಷನ್ ಬಳಿ ಈ ಘಟನೆ ನಡೆದಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಗಾಯದಿಂದಾಗಿ ಅಧಿಕಾರಿ ಬೆರಳುಗಳಿಗೆ ಏಳು ಹೊಲಿಗೆ ಹಾಕಲಾಗಿದೆ. ಮಚ್ಚನ್ನು ಹಿಡಿದ ವ್ಯಕ್ತಿಯನ್ನು ಸುಗತನ್ ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


