ದೇಶ

ವಡಾ ಪಾವ್ ಇಟ್ಟಿದ್ದ ಬ್ಯಾಗ್ ನಲ್ಲಿ ಚಿನ್ನ ಇಟ್ಟು ಮರೆತ ಮಹಿಳೆ: ಪತ್ತೆ ಮಾಡಲು ಪೊಲೀಸರಿಗೆ ಸುಳಿವು ನೀಡಿದ ಇಲಿಗಳು!

ಮಹಿಳೆಯೊಬ್ಬರು ಅಚಾನಕ್ಕಾಗಿ ಕಳೆದುಕೊಂಡಿದ್ದ ಚಿನ್ನಾಭರಣಗಳನ್ನು ಪತ್ತೆ ಮಾಡುವುದಕ್ಕೆ ಪೊಲೀಸರು ಇಲಿಗಳ ಮೂಲಕ ಸುಳಿವು ಪಡೆದ ವಿಲಕ್ಷಣ ಘಟನೆ ಪುಣೆಯಲ್ಲಿ ನಡೆದಿದೆ.

ವಡಾ ಪಾವ್ ಇಟ್ಟಿದ್ದ ಬ್ಯಾಗ್ ನಲ್ಲಿ ಚಿನ್ನ ಇಟ್ಟು ಮರೆತ ಮಹಿಳೆ: ಪತ್ತೆ ಮಾಡಲು ಪೊಲೀಸರಿಗೆ ಸುಳಿವು ನೀಡಿದ ಇಲಿಗಳು!
ಇಲಿ (ಸಾಂಕೇತಿಕ ಚಿತ್ರ)
Published On :

ಮುಂಬೈ: ಮಹಿಳೆಯೊಬ್ಬರು ಅಚಾನಕ್ಕಾಗಿ ಕಳೆದುಕೊಂಡಿದ್ದ ಚಿನ್ನಾಭರಣಗಳನ್ನು ಪತ್ತೆ ಮಾಡುವುದಕ್ಕೆ ಪೊಲೀಸರು ಇಲಿಗಳ ಮೂಲಕ ಸುಳಿವು ಪಡೆದ ವಿಲಕ್ಷಣ ಘಟನೆ ಪುಣೆಯಲ್ಲಿ ನಡೆದಿದೆ.
 
ಸಬರ್ಬನ್ ದಿಂಡೋಶಿಯ ನಿವಾಸಿಯಾಗಿರುವ ಸುಂದರಿ ಪ್ಲನಿಬೆಲ್, ಜೂ.13 ರಂದು ಪೊಲೀಸರನ್ನು ಸಂಪರ್ಕಿಸಿ ತಾವು ಅಚಾನಕ್ಕಾಗಿ 10 ಗ್ರಾಮ್ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದೇನೆ ಎಂದು ದೂರು ನೀಡಿದ್ದರು.
 
ಮನೆಕೆಲಸದಾಕೆಯಾಗಿರುವ ಪ್ಲನಿಬೆಲ್, ತಾವು ಕೆಲಸ ಮಾಡುವ ಸ್ಥಳದಿಂದ ಸೋಮವಾರ ಮನೆಗೆ ವಾಪಸ್ಸಾಗುವಾಗ ವಡಾಪಾವ್ ನೀಡಿದ್ದರು. ಮರುದಿನ ತನ್ನ ಚಿನ್ನಾಭರಣಗಳನ್ನು ಬ್ಯಾಂಕ್ ನಲ್ಲಿಡುವ ಯೋಜನೆ ಇತ್ತು. ಯೋಜನೆಯಂತೇ ಚಿನ್ನಾಭರಣಗಳನ್ನು ತೆಗೆದಿಟ್ಟುಕೊಂಡಿದ್ದಾರೆ. ಅದನ್ನು ವಡಾ ಪಾವ್ ನಲ್ಲಿದ್ದ ಕವರ್ ನಲ್ಲಿಯೇ ಇರಿಸಿದ್ದರು. 

ಬ್ಯಾಂಕ್ ಗೆ ತೆರಳುವ ಮಾರ್ಗದಲ್ಲಿ ತನಗೆ ವಡಾಪಾವ್ ತಿನ್ನುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಭಾವಿಸಿ ವಡಾಪಾವ್ ನ ಬ್ಯಾಗ್ ನ್ನು ಇಬ್ಬರು ಹುಡುಗರಿಗೆ ಕೊಟ್ಟು ಕಳಿಸಿದ್ದಾರೆ. ಆದರೆ ಅದರಲ್ಲಿ ತಾನು ತಂದಿದ್ದ ಚಿನ್ನಾಭರಣ ಇರುವುದನ್ನೂ ಮರೆತಿದ್ದಾರೆ. 

ವಿವರಗಳನ್ನು ಪಡೆದ ಪೊಲೀಸರು ಬ್ಯಾಗ್ ಪಡೆದು ತೆರಳಿದ್ದ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಡಾಪಾವ್ ತಿನ್ನಲು ಯೋಗ್ಯವಾಗಿಲ್ಲದ ಕಾರಣ ಅದನ್ನು ಕಸದ ಬುಟ್ಟಿಗೆ ಎಸೆದೆವು ಎಂದು ಯುವಕರು ಮಾಹಿತಿ ನೀಡಿದ್ದಾರೆ. 

ಸಿಸಿಟಿವಿಯ ಸಹಾಯದಿಂದ ಕಸದಬುಟ್ಟಿ ಇದ್ದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಯುವಕರು ಬ್ಯಾಗ್ ನ್ನು ಎಸೆದ ಕೆಲವೇ ಕ್ಷಣಗಳಲ್ಲಿ ಬ್ಯಾಗ್ ಏಕಾ ಏಕಿ ಚಲಿಸಲು ಪ್ರಾರಂಭವಾಗಿದ್ದು ಕಂಡುಬಂದಿದ್ದು, ಇಲಿಗಳು ಗುಂಡಿಯೊಂದರ ಒಳಗೆ ಕೊಂಡೊಯ್ದಿದ್ದು ಪತ್ತೆಯಾಗಿದೆ. ಗುಂಡಿಯನ್ನು ಪರಿಶೀಲಿಸಿದಾಗ ಅಚ್ಚರಿಯೆಂಬಂತೆ ಚಿನ್ನಾಭರಣಗಳೂ ಪತ್ತೆಯಾಗಿವೆ. ಪೊಲೀಸರು ಅದನ್ನು ಮಹಿಳೆಗೆ ವಾಪಸ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.