ದೇಶದಲ್ಲಿ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್ ಲಸಿಕೆ ನೀಡಿಕೆ- ಮನ್ಸೂಖ್ ಮಾಂಡವೀಯಾ
ದೇಶದಲ್ಲಿನ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಹಾಕಲಾಗಿದೆ. 12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.

ನವದೆಹಲಿ: ದೇಶದಲ್ಲಿನ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಹಾಕಲಾಗಿದೆ. 12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಗುರುವಾರದ ತಾತ್ಕಾಲಿಕ ವರದಿ ಪ್ರಕಾರ, ದೇಶದಲ್ಲಿ ನೀಡಲಾದ ಸಂಚಿತ ಲಸಿಕೆ ಪ್ರಮಾಣ 195.67 ಕೋಟಿ ಮೀರಿದೆ. ಸಬ್ ಕಾ ಸಾಥ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಭಾರತದಲ್ಲಿ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ವಿಶ್ವದ ಬೃಹತ್ ಲಸಿಕಾ ಅಭಿಯಾನ ಹೊಸ ಹೆಗ್ಗುರುತುಗಳೊಂದಿಗೆ ಮುಂದುವರೆಯಲಿದೆ ಎಂದು ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದು, ಆದಷ್ಟು ಬೇಗನೆ ಮುಂದೆ ಕೋವಿಡ್ -19 ಲಸಿಕೆ ಪಡೆದುಕೊಳ್ಳುವಂತೆ ಎಲ್ಲ ಯುವ ಸ್ನೇಹಿತರಿಗೆ ಮನವಿ ಮಾಡುವುದಾಗಿ ಅವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಬೆಳಗ್ಗೆ ಏಳು ಗಂಟೆಯವರೆಗೂ 18ರಿಂದ 59 ವರ್ಷದೊಳಗಿನವರಿಗೆ ಒಟ್ಟಾರೇ, 3,661,899 ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. 15- 18 ವರ್ಷದೊಳಗಿನ ಮಕ್ಕಳಿಗೆ 5.99 ಕೋಟಿ ಗೂ ಹೆಚ್ಚು ಮೊದಲು ಡೋಸ್ ಲಸಿಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


