ಭಯಾನಕ ವಿಡಿಯೋ: ಮುಂಬೈನಲ್ಲಿ ಪಕ್ಷಿಯ ಪ್ರಾಣ ಉಳಿಸಲು ಕಾರ್ ನಿಂದ ಕೆಳಗಿಳಿದವರ ಪ್ರಾಣಪಕ್ಷಿಯೇ ಹಾರಿಹೋಯ್ತು!
ಸಾವು ಯಾವಾಗ ಯಾರಿಗೆ ಹೇಗೆ ಬರುತ್ತೆ ಎಂದು ಹೇಳಲು ಅಸಾಧ್ಯ. ಗಾಯಗೊಂಡಿದ್ದ ಪಕ್ಷಿಯನ್ನ ರಕ್ಷಿಸಲು ಕಾರ್ ನಿಂದ ಕೆಳಗಿಳಿದ ಇಬ್ಬರಿಗೆ ಟ್ಯಾಕ್ಸಿ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸಾವನ್ನಪ್ಪಿರುವ ಕರುಣಾಜನಕ ಘಟನೆ....

ಮುಂಬೈ: ಸಾವು ಯಾವಾಗ ಯಾರಿಗೆ ಹೇಗೆ ಬರುತ್ತೆ ಎಂದು ಹೇಳಲು ಅಸಾಧ್ಯ. ಗಾಯಗೊಂಡಿದ್ದ ಪಕ್ಷಿಯನ್ನ ರಕ್ಷಿಸಲು ಕಾರ್ ನಿಂದ ಕೆಳಗಿಳಿದ ಇಬ್ಬರಿಗೆ ಟ್ಯಾಕ್ಸಿ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸಾವನ್ನಪ್ಪಿರುವ ಕರುಣಾಜನಕ ಘಟನೆ ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯಲ್ಲಿ ನಡೆದಿದೆ.
ಮೇ 30 ರಂದು ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯಲ್ಲಿ ಗಾಯಗೊಂಡ ಪಕ್ಷಿಯನ್ನು ರಕ್ಷಿಸಲು ಕಾರಿನಿಂದ ಇಳಿದ 43 ವರ್ಷದ ಉದ್ಯಮಿ ಮತ್ತು ಅವರ ಚಾಲಕನಿಗೆ ಟ್ಯಾಕ್ಸಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ 30 ರಂದು ಮಧ್ಯಾಹ್ನ ಉದ್ಯಮಿ , ನೆಪಿನ್‌ಸಿಯಾ ರಸ್ತೆಯ ನಿವಾಸಿ ಅಮರ್ ಮನೀಷ್ ಜರಿವಾಲಾ ಅವರು ಮಲಾಡ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂದ್ರಾ ವರ್ಲಿ ಸೀ ಲಿಂಕ್ ಮಾರ್ಗದಲ್ಲಿ ಅವರ ಕಾರಿಗೆ ಒಂದು ಹಕ್ಕಿ ಡಿಕ್ಕಿ ಹೊಡೆದಿದೆ. ನಂತರ ಗಾಯಗೊಂಡ ಪಕ್ಷಿಯನ್ನು ಉಳಿಸಲು ಅಮರ್ ಮನೀಷ್ ಜರಿವಾಲಾ ಕೆಳಗಿಳಿದರು. ವೇಗವಾಗಿ ಬಂದ ಟ್ಯಾಕ್ಸಿ ಜರಿವಾಲಾ ಮತ್ತು ಅವರ ಡ್ರೈವರ್ ಶ್ಯಾಮ್ ಸುಂದರ್ ಕಾಮತ್ ಅವರಿಗೆ ಡಿಕ್ಕಿ ಹೊಡೆದಿದೆ. ಜರಿವಾಲಾರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರೆ, ಚಾಲಕ ಶ್ಯಾಮ್ ಸುಂದರ್ ಕಾಮತ್ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕ ರವೀಂದ್ರ ಕುಮಾರ್ ಜೈಸ್ವರ್ ವಿರುದ್ಧ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದ್ದು ಬಂಧಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


