ದೇಶ

ಸೋರುತ್ತಿರುವ ಕಟ್ಟಡ ಮೇಲ್ಛಾವಣಿಯಡಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು, ವೀಡಿಯೊ ವೈರಲ್

ಸರ್ಕಾರಿ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿಗಳು ಸೋರುತ್ತಿರುವ ಕಟ್ಟಡದ ಮೇಲ್ಛಾವಣಿ ಅಡಿಯಲ್ಲಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋರುತ್ತಿರುವ ಕಟ್ಟಡ ಮೇಲ್ಛಾವಣಿಯಡಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು, ವೀಡಿಯೊ ವೈರಲ್
ಪ್ರತ್ಯಕ್ಷ ದೃಶ್ಯ
Published On :

ಸಿಯೋನಿ: ಸರ್ಕಾರಿ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿಗಳು ಸೋರುತ್ತಿರುವ ಕಟ್ಟಡದ ಮೇಲ್ಛಾವಣಿ ಅಡಿಯಲ್ಲಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಇದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ ಮತ್ತು ಮಕ್ಕಳ ಪರಿಸ್ಥಿತಿ. ಟ್ರೈಬಲ್ ಆರ್ಮಿ ಎಂಬ ಹೆಸರಿನ ಜನಪ್ರಿಯ ಬುಡಕಟ್ಟು ಹಕ್ಕುಗಳ ವಕಾಲತ್ತು ಖಾತೆಯು ಟ್ವಿಟ್ಟರ್‌ ಈ ವಿಡಿಯೋ ಶೇರ್ ಮಾಡಿದೆ.

ಈ ವೀಡಿಯೊ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಖೈರಿಕಲಾ ಗ್ರಾಮದ ಪ್ರಾಥಮಿಕ ಶಾಲೆ. ಇಲ್ಲಿ ವಿದ್ಯಾರ್ಥಿಗಳು ಮಳೆನೀರು ಮೇಲ್ಛಾವಣಿಯಿಂದ ಬೀಳದಂತೆ ಶಾಲೆಯೊಳಗೆ ಛತ್ರಿ ಹಿಡಿದು ಪಾಠ ಕೇಳುವುದನ್ನು ಕಾಣಬಹುದು. ಶಿವರಾಜ್ ಚೌಹಾಣ್ ತನ್ನ ಮಗುವನ್ನು ವಿದೇಶಕ್ಕೆ ಓದಲು ಕಳುಹಿಸುತ್ತಾನೆ. ಇದು ಬಡ ಬುಡಕಟ್ಟು ಮಕ್ಕಳ ಸ್ಥಿತಿ ಎಂದು ಬರಹದಡಿ ವಿಡಿಯೋ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.