ದೇಶ

ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 25ಕ್ಕೆ ಮುಂದೂಡಿಕೆ: ಎನ್ ಟಿಎ

ಜಂಟಿ ಪ್ರವೇಶ ಪರೀಕ್ಷೆ(ಜೆಇಇ), ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 21 ರ ಬದಲಿಗೆ ಜುಲೈ 25ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.

ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 25ಕ್ಕೆ ಮುಂದೂಡಿಕೆ: ಎನ್ ಟಿಎ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ(ಜೆಇಇ), ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 21 ರ ಬದಲಿಗೆ ಜುಲೈ 25ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.

"ಜುಲೈ 25 ರಿಂದ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಪ್ರಾರಂಭವಾಗಲಿದ್ದು, ಭಾರತದ ಹೊರಗಿನ 17 ನಗರಗಳು ಸೇರಿದಂತೆ ಸುಮಾರು 500 ನಗರಗಳ ವಿವಿಧ ಕೇಂದ್ರಗಳಲ್ಲಿ 6.29 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ " ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 21 ರಿಂದ ಜುಲೈ 30 ರವರೆಗೆ ನಿಗದಿಪಡಿಸಲಾಗಿದ್ದ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 25ಕ್ಕೆ ಮುಂದೂಡಲಾಗಿದೆ. ಆದರೆ ಮುಂದೂಡಿಕೆ ಹಿಂದಿನ ಕಾರಣವನ್ನು ಎನ್‌ಟಿಎ ಉಲ್ಲೇಖಿಸಿಲ್ಲ.

jeemain.nta.nic.in ಭೇಟಿ ನೀಡಿ, ಗುರುವಾರದಿಂದ ಪರೀಕ್ಷಾ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಎನ್‌ಟಿಎ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.