ಎನ್ಇಇಟಿ ದಂಧೆ ಬಯಲಿಗೆಳೆದ ಸಿಬಿಐ; 7 ಮಂದಿ ಬಂಧನ
ಕೇಂದ್ರ ತನಿಖಾ ದಳ (ಸಿಬಿಐ) ಎನ್ಇಇಟಿ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದು 7 ಮಂದಿಯನ್ನು ಬಂಧಿಸಿದೆ.

ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಎನ್ಇಇಟಿ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದು 7 ಮಂದಿಯನ್ನು ಬಂಧಿಸಿದೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಲ್ಲಿ ನೈಜ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಅವರಂತೆಯೇ ಸೋಗು ಹಾಕುತ್ತಿದ್ದ ದಂಧೆ ಇದಾಗಿದೆ. ಎನ್ ಟಿಎಯಿಂದ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ನೈಜ ಅಭ್ಯರ್ಥಿಗಳ ಸೋಗಿನಲ್ಲಿ ಪೇಪರ್ ಸಾಲ್ವರ್(solvers) ಗಳನ್ನು ವ್ಯವಸ್ಥೆ ಮಾಡುವುದಕ್ಕೆ ಕ್ರಿಮಿನಲ್ ಪಿತೂರಿ ನಡೆಯುತ್ತಿದ್ದ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಲಭ್ಯವಾಗಿತ್ತು. ದೆಹಲಿ ಹಾಗೂ ಹರ್ಯಾಣಗಳ ಹಲವು ಕೇಂದ್ರಗಳಲ್ಲಿ ಈ ಅಕ್ರಮ ನಡೆದಿತ್ತು ಎಂದು ಎಫ್ಐಆರ್ ಆರೋಪಿಸಿದೆ.
2022 ಯುಜಿ ಎನ್ಇಇಟಿ ಪರೀಕ್ಷೆಯಲ್ಲಿ ವಾಸ್ತವದಲ್ಲಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳ ಪರವಾಗಿ ಮತ್ತೆ ಇನ್ಯಾರೋ ಪರೀಕ್ಷೆ ಬರೆಯುತ್ತಿದ್ದರು. ಇದಕ್ಕಾಗಿ ಬೃಹತ್ ಮೊತ್ತದ ಹಣವನ್ನು ಪಡೆಯುತ್ತಿದ್ದರು.
ಅಭ್ಯರ್ಥಿಗಳ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ, ಈ ಆರೋಪಿಗಳು ತಮಗೆ ಬೇಕಾದ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದರು.
ಸುಶೀಲ್ ರಂಜನ್, ಬ್ರಿಜ್ ಮೋಹನ್ ಸಿಂಗ್, ಪಪ್ಪು, ಉಮಾ ಶಂಕರ್ ಗುಪ್ತಾ, ನಿಧಿ, ಕೃಷ್ಣ ಶಂಕರ್, ಯೋಗಿ, ಸನ್ನಿ ರಂಜನ್, ರಘುನಂದನ್, ಜೀಪು ಲಾಲ್, ಹಿಮೇಂದ್ರ ಹಾಗೂ ಭರತ್ ಸಿಂಗ್ ಆರೋಪಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


