ಕುದುರೆಯ ಮೇಲೆ ಸ್ವಿಗ್ಗಿ ಬ್ಯಾಗ್ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆ: ಯಾರವನು ಗೊತ್ತೇ?
ಕುದುರೆ ಮೇಲೆ ಕುಳಿತು ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿದ್ದ ವೈರಲ್ ವೀಡಿಯೋದಲ್ಲಿದ್ದ ವ್ಯಕ್ತಿ ಯಾರೆಂಬುದು ಕೊನೆಗೂ ಬಹಿರಂಗಗೊಂಡಿದೆ.

ಮುಂಬೈ: ಕುದುರೆ ಮೇಲೆ ಕುಳಿತು ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿದ್ದ ವೈರಲ್ ವೀಡಿಯೋದಲ್ಲಿದ್ದ ವ್ಯಕ್ತಿ ಯಾರೆಂಬುದು ಕೊನೆಗೂ ಬಹಿರಂಗಗೊಂಡಿದೆ.
ವಿಡಿಯೋ ವೈರಲ್ ಆಗಿ, ಆ ವ್ಯಕ್ತಿಯನ್ನು ಗುರುತು ಹಿಡಿದವರಿಗೆ ಸ್ವಿಗ್ಗಿ ಬಹುಮಾನವನ್ನೂ ಘೋಷಣೆ ಮಾಡಿತ್ತು. ಅದರಂತೆ ಹಲವು ಮಂದಿ ವ್ಯಕ್ತಿ ಹಾಗೂ ಕುದುರೆಯ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ಹಲವರು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಆದರೆ ಈ ಸಸ್ಪೆನ್ಸ್ ಗೆ ಕೊನೆಗೂ ಸ್ವಿಗ್ಗಿ ಸಂಸ್ಥೆಯೇ ತೆರೆ ಎಳೆದಿದೆ.
ಈ ಬಗ್ಗೆ ಟ್ವಿಟರ್ ನಲ್ಲೇ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿರುವ ಸ್ವಿಗ್ಗಿ, ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದು, ಸ್ವಿಗ್ಗಿ ಡೆಲಿವರಿ ಬ್ಯಾಗ್ ಧರಿಸಿ ಕುದುರೆ ಮೇಲಿದ್ದ ವ್ಯಕ್ತಿ ಯಾರೆಂಬುದನ್ನು ಹೇಳಿದೆ.
ಸ್ವಿಗ್ಗಿ ನೀಡಿರುವ ಮಾಹಿತಿಯ ಪ್ರಕಾರ, ಕುದುರೆ ಮೇಲಿದ್ದ ವ್ಯಕ್ತಿ 17 ವರ್ಷದ ಬಾಲಕ ಸುಶಾಂತ್ ಆಗಿದ್ದು, ಆತ ಡೆಲಿವರಿ ಕಾರ್ಯನಿರ್ವಾಹಕನಲ್ಲ ಆತ ಪಡೆದ ಪದಾರ್ಥಗಳನ್ನು ವಾಪಸ್ ನೀಡುವುದಕ್ಕೆ ಮರೆತುಬಿಡುತ್ತಾನೆ ಎಂದು ಸ್ವಿಗ್ಗಿ ಹೇಳಿದೆ. ಈ ಪ್ರಕರಣದಲ್ಲಿ ಆತ ಸ್ವಿಗ್ಗಿ ಬ್ಯಾಗ್ ನ್ನು ಪಡೆದು ಅದನ್ನು ವಾಪಸ್ ನೀಡಲು ಮರೆತಿದ್ದಾನೆ. ಆತ ಮುಂಬೈ ನ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದು, ಮದುವೆ ದಿಬ್ಬಣದ ಕಾರ್ಯಕ್ರಮಗಳಿಗೆ ಸಿಂಗರಿಸಿದ ಕುದುರೆಗಳನ್ನು ನೀಡುತ್ತಾನೆ.
ಇದನ್ನೂ ಓದಿ: ಈ ಸ್ವಿಗ್ಗಿ ಡೆಲಿವರಿ ನೀಡುತ್ತಿರುವ ವ್ಯಕ್ತಿಯನ್ನು ಗುರುತಿಸಿದವರಿಗೆ 5 ಸಾವಿರ ಬಹುಮಾನ ಘೋಷಿಸಿದ ಸಂಸ್ಥೆ
ಕುದುರೆಯ ಹೆಸರು ನೆಟ್ಟಿಗರು ಹೇಳಿದಂತೆ ತೂಫಾನ್ ಅಲ್ಲ ಬಿಜಲಿಯೂ ಅಲ್ಲ. ಅದರ ಹೆಸರು ಶಿವ ಎಂಬುದಾಗಿದ್ದು, ಆ ಬ್ಯಾಗ್ ನಲ್ಲಿ ಕುದುರೆಗೆ ಸಿಂಗರಿಸುವ ವಸ್ತುಗಳಿದ್ದವು ಎಂದು ಹೇಳಿದೆ. ಬಾಲಕ ಕುದುರೆಯ ಮೇಲೆ ಹೋಗುತ್ತಿರುವ ವೀಡಿಯೋವನ್ನು ಅವಿ ಎಂಬಾತ ಶೂಟ್ ಮಾಡಿದ್ದರು. ಆತನಿಗೆ ಈ ಹಿಂದೆ ಭರವಸೆ ನೀಡಿದ್ದಂತೆ ಸ್ವಿಗ್ಗಿ 5000 ರೂಪಾಯಿ ಬಹುಮಾನ ನೀಡಿದೆ. ಈ ಕುದುರೆಯನ್ನು ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಣಿಗಳಿಗೂ ನೋವುಂಟುಮಾಡಿಲ್ಲ, ನಾವು ಸಾಮಾಜಿಕ ಪ್ರಾಣಿಯೂ ಸೇರಿದಂತೆ ಎಲ್ಲಾ ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ ಎಂದು ಸ್ವಿಗ್ಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


