ಶಿವಸೇನೆ ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೇಡಿಕೆ ಪರಿಗಣಿಸುವ ಮುನ್ನ ನಮ್ಮ ವಾದ ಆಲಿಸಿ: ಚುನಾವಣ ಆಯೋಗಕ್ಕೆ ಉದ್ಧವ್ ಬಣ ಮನವಿ
ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಶಿವಸೇನೆ ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನೂ ಆಲಿಸಿ ಎಂದು ಮನವಿ ಮಾಡಿದೆ.

ನವದೆಹಲಿ: ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಶಿವಸೇನೆ ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನೂ ಆಲಿಸಿ ಎಂದು ಮನವಿ ಮಾಡಿದೆ.
ಶಿವಸೇನೆಯ ಏಕನಾಥ್ ಶಿಂಧೆ ಬಣದ ಯಾವುದೇ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನೂ ಆಲಿಸಬೇಕೆಂಬುದು ಉದ್ಧವ್ ಠಾಕ್ರೆ ಬಣದ ಮನವಿಯಾಗಿದೆ.
ಶಿವಸೇನೆಯ ನಾಯಕ ಅನಿಲ್ ದೇಸಾಯಿ, ಈ ಮನವಿ ಮಾಡಿದ್ದು, ಇದೊಂದು ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಕಳೆದ ತಿಂಗಳು ಎಂವಿಎ ಸರ್ಕಾರದಿಂದ ಬಂಡೆದ್ದು 40 ಶಾಸಕರೊಂದಿಗೆ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದರು.
ಏಕನಾಥ್ ಶಿಂಧೆ ಅವರ ಸರ್ಕಾರಕ್ಕೆ 10 ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ. ಜೂ.30 ರಂದು ಬಿಜೆಪಿ-ಏಕನಾಥ್ ಶಿಂಧೆ ಬಣದ ಶಾಸಕರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿಂಧೆ ತಮ್ಮದೇ ಮೂಲ ಶಿವಸೇನೆ ಎಂಬ ಹಕ್ಕನ್ನು ಮಂಡಿಸಿದ್ದು, ಮೂರನೇ ಎರಡರಷ್ಟು ಶಾಸಕರ ಬೆಂಬಲ ತಮಗೇ ಇದೆ ಎಂದು ಹೇಳಿದ್ದರು.
ಶಿವಸೇನೆ ಸಂಸದೀಯ ಪಕ್ಷದಲ್ಲೂ ಇಬ್ಭಾಗವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಕನಿಷ್ಠ 14 ಮಂದಿ ಲೋಕಸಭಾ ಸದಸ್ಯರು ಶಿಂಧೆ ನೇತೃತ್ವದ ಬಣಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


