ಅಮ್ನೆಸ್ಟಿ ಇಂಡಿಯಾಗೆ 51.72 ಕೋಟಿ ರೂ., ಮಾಜಿ ಸಿಇಒ ಆಕಾರ್ ಪಟೇಲ್‌ಗೆ 10 ಕೋಟಿ ರೂ. ದಂಡ ವಿಧಿಸಿದ ಇಡಿ
ಆಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ರೂಪಾಯಿ ದಂಡವನ್ನು ಜಾರಿ ನಿರ್ದೇಶನಾಲಯ (ಇಡಿ) ವಿಧಿಸಿದೆ.

ನವದೆಹಲಿ: ಆಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ರೂಪಾಯಿ ದಂಡವನ್ನು ಜಾರಿ ನಿರ್ದೇಶನಾಲಯ(ಇಡಿ) ವಿಧಿಸಿದೆ.
ಆಮ್ನೆಸ್ಟಿ ಇಂಟರ್‌ನ್ಯಾಶನಲ್, ಯುಕೆಯು ಎಫ್‌ಡಿಐ ಮಾರ್ಗವನ್ನು ಅನುಸರಿಸಿ ತನ್ನ ಭಾರತೀಯ ಘಟಕಗಳ ಮೂಲಕ(ಎಫ್‌ಸಿಆರ್‌ಎ ಅಲ್ಲದ ಕಂಪನಿಗಳು) 'ದೊಡ್ಡ ಮೊತ್ತದ' ವಿದೇಶಿ ಕೊಡುಗೆಯನ್ನು ರವಾನಿಸುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಫೆಡರಲ್ ಏಜೆನ್ಸಿ ಹೇಳಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಿಂದ(FCRA) ತಪ್ಪಿಸಿಕೊಳ್ಳಲು ಉದ್ದೇಶದಿಂದ ಭಾರತದಲ್ಲಿ ತನ್ನ NGO ಚಟುವಟಿಕೆಗಳನ್ನು ವಿಸ್ತರಿಸಿತ್ತು ಎಂಬ ಆರೋಪವಿದೆ.
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ (ಎಐಐಎಫ್‌ಟಿ) ಮತ್ತು ಎಫ್‌ಸಿಆರ್‌ಎ ಅಡಿಯಲ್ಲಿರುವ ಇತರ ಟ್ರಸ್ಟ್‌ಗಳಿಗೆ ಗೃಹ ವ್ಯವಹಾರಗಳ ಸಚಿವಾಲಯವು ಪೂರ್ವ ನೋಂದಣಿ ಅಥವಾ ಅನುಮತಿಗಳನ್ನು ನಿರಾಕರಿಸಿದ ಹೊರತಾಗಿಯೂ ಇದು ನಡೆದಿದೆ ಎಂದು ಇಡಿ ಹೇಳಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(FEMA) ನಿಬಂಧನೆಗಳನ್ನು ಉಲ್ಲಂಘಿಸಿ ಹಣವನ್ನು ಸ್ವೀಕರಿಸಿದ ಕಾರಣ ದಂಡದ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


