ಬಿಹಾರ: 5 ವರ್ಷದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಿಕ್ಷಕ, ಪ್ರಜ್ಞೆ ತಪ್ಪಿದ ಮಗು
ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ನಂತರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ರಾಜಧಾನಿ ಪಾಟ್ನಾದ ಧನರುವಾ ಬ್ಲಾಕ್‌ನಲ್ಲಿ ನಡೆದ...

ಪಾಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ನಂತರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ರಾಜಧಾನಿ ಪಾಟ್ನಾದ ಧನರುವಾ ಬ್ಲಾಕ್‌ನಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ವೈರಲ್ ಆಗುತ್ತಿದೆ.
ಐದು ವರ್ಷದ ಮಗುವನ್ನು ಹೊಡೆಯಲು ಶಿಕ್ಷಕನು ಮೊದಲು ಕಬ್ಬಿನ ಕೋಲು ಬಳಸಿದ್ದು, ಮಗು ನೋವಿನಿಂದ ಅಳುತ್ತಿರುವುದನ್ನ ವಿಡಿಯೋ ತೋರಿಸುತ್ತದೆ. ಹೊಡೆತದ ಪರಿಣಾಮವು ಎಷ್ಟು ಪ್ರಬಲವಾಗಿದೆ ಎಂದರೆ ಕೋಲು ಎರಡು ಭಾಗಗಳಾಗುತ್ತದೆ.
ಕಬ್ಬಿನ ಕೋಲು ಮುರಿದ ನಂತರ, ಶಿಕ್ಷಕನು ವಿದ್ಯಾರ್ಥಿಗೆ ಕೈಯಿಂದ ಹೊಡೆಯಲು ಪ್ರಾರಂಭಿಸುತ್ತಾನೆ ಹಾಗೂ ಬಾಲಕನ ಕೂದಲನ್ನು ಸಹ ಎಳೆಯುತ್ತಾನೆ. ಹುಡುಗ ಏತನ್ಮಧ್ಯೆ, ಅಳುತ್ತಲೇ ಇರುತ್ತಾನೆ ಮತ್ತು ಹೊಡೆತ ನಿಲ್ಲಿಸುವಂತೆ ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಬಳಿಕ ಬಾಲಕ ನೆಲದ ಮೇಲೆ ಬೀಳುತ್ತಾನೆ, ಆದರೆ ಶಿಕ್ಷಕನು ತನ್ನ ಚಿತ್ರಹಿಂಸೆಯನ್ನು ಮುಂದುವರೆಸುತ್ತಾನೆ. ಈ ವೇಳೆ ಇತರ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಲು ತುಂಬಾ ಹೆದರುತ್ತಾರೆ. ಜಯಾ ಕೋಚಿಂಗ್ ಕ್ಲಾಸ್ ಟ್ಯೂಷನ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.
ಅಮಾನುಷವಾಗಿ ಥಳಿಸಿದ್ದರಿಂದ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಗುವಿನ ಘೋರ ಸ್ಥಿತಿಯ ಬಗ್ಗೆ ತಿಳಿದಾಗ ಸ್ಥಳೀಯರು ಶಿಕ್ಷಕನನ್ನು ಛೋಟು ಎಂದು ಗುರುತಿಸಿದ್ದು, ಅವನನ್ನು ಹಿಡಿದು ಥಳಿಸಿದರು.
ಛೋಟು ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ಈ ರೀತಿ ಮಾಡಿದ್ದಾರೆ ಎಂದು ಕೋಚಿಂಗ್ ಸೆಂಟರ್ ಮಾಲೀಕ ಅಮರಕಾಂತ್ ಕುಮಾರ್ ಹೇಳಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


