ಗುಜರಾತ್: ಮಗಳ ಅಶ್ಲೀಲ ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ; ಪ್ರಶ್ನಿಸಲು ಹೋದ ಬಿಎಸ್‌ಎಫ್ ಯೋಧನ ಹತ್ಯೆ
ಮಗಳ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹುಡುಗನನ್ನು ಪ್ರಶ್ನಿಸಲು ಹೋದ ಬಿಎಸ್‌ಎಫ್ ಯೋಧನನ್ನು ಹುಡುಗನ ಮನೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಗುಜರಾತ್: ಮಗಳ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹುಡುಗನನ್ನು ಪ್ರಶ್ನಿಸಲು ಹೋದ ಬಿಎಸ್‌ಎಫ್ ಯೋಧನನ್ನು ಹುಡುಗನ ಮನೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಬಿಎಸ್ಎಫ್ ಯೋಧ ಮೇಲಾಜಿ ವಘೇಲಾ ಅವರ ಮಗಳು ಹಾಗೂ ಆಕೆಯ ತರಗತಿಯಲ್ಲೇ ಓದುತ್ತಿದ್ದ 15 ವರ್ಷದ ಬಾಲಕ ಪರಸ್ಪರ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಈ 15 ವರ್ಷದ ಯುವಕ ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕಿಯ ಅಶ್ಲೀಲ ವಿಡಿಯೋವನ್ನು ಪೋಸ್ಟ್ ಮಾಡಿದ್ದ, ಇದು ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಿಸಲು ಆತನ ಮನೆಗೆ ಹೋದ ಯೋಧ ಹಾಗೂ ಆತನ ಕುಟುಂಬವನ್ನು ಬಾಲಕನ ಮನೆಯವರು ನಿಂದಿಸಲು ಶುರು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮನೆಯವರೆಲ್ಲರೂ ಸೇರಿ ಯೋಧನನ್ನು ಥಳಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರು ನಂತರ ಸಾವನ್ನಪ್ಪಿದ್ದಾರೆ.
ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ನಾಡಿಯಾಡ್ ತಹಸಿಲ್‌ನ ಚಕ್ಲಾಸಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ತನ್ನ ಮಗಳ ಅಶ್ಲೀಲ ವೀಡಿಯೊವನ್ನು ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಕಾರಣಕ್ಕಾಗಿ ಯೋಧನನ್ನು ಹತ್ಯೆ ಮಾಡಲಾಗಿದೆ.
ಯೋಧ ಹಾಗೂ ಆತನ ಕುಟುಂಬ ಅಶ್ಲೀಲ ವಿಡಿಯೋ ವಿಚಾರವಾಗಿ ಕೇಳಲು ಶನಿವಾರ ಚಕ್ಲಾಸಿ ಗ್ರಾಮದ ಬಾಲಕನ ಮನೆಗೆ ತೆರಳಿದಾಗ ಘಟನೆ ಸಂಭವಿಸಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬಿಎಸ್‌ಎಫ್ ಯೋಧ ಮತ್ತು ಅವರ ಕುಟುಂಬವು ಜಾದವ್ ಮನೆಗೆ ಹೋಗಿದ್ದಾರೆ. ಈ ವೇಳೆ ಹುಡುಗನ ತಂದೆ ಮತ್ತು ಕುಟುಂಬದ ಇತರ ಆರು ಸದಸ್ಯರು ವಘೇಲಾ ಮತ್ತು ಅವರ ಮಗನ ತಲೆಯ ಮೇಲೆ ಕೋಲು ಮತ್ತು ಕುಡಗೋಲಿನಿಂದ ಹಲ್ಲೆ ನಡೆಸಿದರು. ಈ ವೇಳೆ ಹುಡುಗಿಯ ತಾಯಿ ಮಂಜುಳಾಬೆನ್ ಅವರಿಗೂ ಗಾಯಗಳಾಗಿವೆ. ನಾವು ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


