ದೇಶ

ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ: ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ; ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಟಿವಿ ಮೆಕ್ಯಾನಿಕ್ ಒಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿದ್ದಾರೆ.

ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ: ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ; ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ
ಸಾನಿಯಾ ಮಿರ್ಜಾ
Published On :

ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಟಿವಿ ಮೆಕ್ಯಾನಿಕ್ ಒಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿದ್ದಾರೆ.

ಜಸೋವರ್ ಗ್ರಾಮದ ಸಾನಿಯಾ ಮಿರ್ಜಾ ಅವರೇ ಈ ಸಾಧಕಿ. ಈ ಮೂಲಕ ಅವರು ಫೈಟರ್ ಪೈಲಟ್ ಆದ ದೇಶದ ಮೊದಲ ಮುಸ್ಲಿಂ ಹುಡುಗಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ದೇಶಕ್ಕೇ ಕೀರ್ತಿ ತಂದಿದ್ದಾರೆ.

ಮಿರ್ಜಾಪುರದ ಜಸೋವರ್‌ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್‌ ಆಗಿದ್ದಾರೆ. ಬಡತನದಲ್ಲಿ ಬೆಳೆದ ಯುವತಿಯೊಬ್ಬಳು ಇದೀಗ ಈ ಸಾಧನೆ ಮಾಡಿದ್ದು, ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ವಾಯುಪಡೆಯ ಪೈಲಟ್‌ ತರಬೇತಿಗೆ ಆಯ್ಕೆಯಾಗಿದ್ದಾರೆ. ಪುಣೆಯ ಎನ್‌ಡಿಎ ಖಡಕ್‌ವಾಸ್ಲಾಕ್ಕೆ ಅವರು ಡಿ.27 ಕ್ಕೆ ದಾಖಲಾಗಲಿದ್ದಾರೆ. ಅಲ್ಲಿ ಅವರಿಗೆ ಪೈಲಟ್‌ ತರಬೇತಿ ನಡೆಯಲಿದೆ.

ನನ್ನ ಈ ಸಾಧನೆಯನ್ನು ತಂದೆ ತಾಯಿಗೆ ಅರ್ಪಣೆ ಮಾಡುತ್ತೇನೆ. 2022ರ ಎನ್‌ಡಿಎ ಪರೀಕ್ಷೆಯಲ್ಲಿ, ಫೈಟರ್ ಪೈಲಟ್‌ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ 2 ಸ್ಥಾನ ಮಾತ್ರ ಇತ್ತು. ಎರಡನೇ ಪ್ರಯತ್ನದಲ್ಲಿ ನಾನು ತೇರ್ಗಡೆಯಾದೆ ಎಂದು ಸಾನಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.