ದೇಶ

ತಮಿಳುನಾಡಿನಲ್ಲಿ 'ದಿ ರೈಸಿಂಗ್ ಸನ್': ಸ್ಟಾಲಿನ್ ಸಂಪುಟಕ್ಕೆ ಪುತ್ರ ಪುತ್ರ ಉದಯ ನಿಧಿ ಸೇರ್ಪಡೆ ನಾಳೆ!

ಹಲವು ತಿಂಗಳ ಚರ್ಚೆ ನಂತರ, ಡಿಎಂಕೆ ಕುಟುಂಬದ ವಂಶಸ್ಥ ಉದಯನಿಧಿ ಅವರು ಬುಧವಾರ ತಮ್ಮ ತಂದೆ ಎಂ.ಕೆ.ಸ್ಟಾಲಿನ್ ಅವರ ಸಂಪುಟಕ್ಕೆ ಸೇರಲಿದ್ದಾರೆ.

ತಮಿಳುನಾಡಿನಲ್ಲಿ 'ದಿ ರೈಸಿಂಗ್ ಸನ್': ಸ್ಟಾಲಿನ್ ಸಂಪುಟಕ್ಕೆ ಪುತ್ರ ಪುತ್ರ ಉದಯ ನಿಧಿ ಸೇರ್ಪಡೆ ನಾಳೆ!
ಉದಯನಿಧಿ ಸ್ಚಾಲಿನ್
Published On :

ಚೆನ್ನೈ: ಹಲವು ತಿಂಗಳ ಚರ್ಚೆ ನಂತರ, ಡಿಎಂಕೆ  ಕುಟುಂಬದ ವಂಶಸ್ಥ ಉದಯನಿಧಿ ಅವರು ಬುಧವಾರ ತಮ್ಮ ತಂದೆ ಎಂ.ಕೆ.ಸ್ಟಾಲಿನ್ ಅವರ ಸಂಪುಟಕ್ಕೆ ಸೇರಲಿದ್ದಾರೆ.

45 ವರ್ಷದ ಉದಯನಿಧಿ ಅವರು ಇದೇ 14ರಂದು ಬೆಳಿಗ್ಗೆ 9.30 ಕ್ಕೆ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಪಾಲರ ಕಚೇರಿಯ ಅಧಿಕೃತ ಪ್ರಕಟಣೆ ಸೋಮವಾರ ಸಂಜೆ ತಿಳಿಸಿದೆ.

ವಿಶೇಷ ಕಾರ್ಯಕ್ರಮ ಅನುಷ್ಠಾನ (ಎಸ್‌ಪಿಐ) ಜೊತೆಗೆ ಉದಯ್ ಅವರಿಗೆ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಖಾತೆ ನೀಡಬಹುದು ಎಂದು ಡಿಎಂಕೆ ಮತ್ತು ಸರ್ಕಾರದ ಉನ್ನತ ಮೂಲಗಳು  ತಿಳಿಸಿವೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಉದಯನಿಧಿ ಸ್ಟಾಲಿನ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸುವಂತೆ ತಮಿಳುನಾಡು ರಾಜ್ಯಪಾಲರಾದ ಆರ್.ಎನ್ ರವಿ ಅವರಿಗೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಆ ಶಿಫಾರಸಿಗೆ ಅನುಮೋದನೆ ನೀಡಿದ್ದಾರೆ.

ಡಿಎಂಕೆ ಅಧಿಕಾರಕ್ಕೆ ಬಂದ 1 ವರ್ಷದ ನಂತರ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮೊದಲ ಸಂಪುಟ ವಿಸ್ತರಣೆ ಇದಾಗಿದೆ. 45 ವರ್ಷದ ಉದಯನಿಧಿ ಸ್ಟಾಲಿನ್ ಕಳೆದ ವರ್ಷ ಚೆಪಾಕ್ ತಿರುವಲ್ಲಿಕೇಣಿ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗಿದ್ದರು. ಈ ಹಿಂದೆ ಅವರ ಅಜ್ಜ ಕರುಣಾನಿಧಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.