ಎಂಸಿಡಿ ಚುನಾವಣೆ: ಆಯ್ಕೆಯಾದವರ ಪೈಕಿ ಶೇ.66 ರಷ್ಟು ಮಂದಿ 41-70 ವಯಸ್ಸಿನವರು, ಶೇ.53 ರಷ್ಟು ಮಹಿಳೆಯರು
ಎಂಸಿಡಿಗೆ ಆಯ್ಕೆಯಾದ 250 ಕೌನ್ಸಿಲರ್ ಗಳ ಪೈಕಿ ಶೇ.51 ರಷ್ಟು ಮಂದಿ ತಮ್ಮ ವಿದ್ಯಾರ್ಹತೆಯನ್ನು ಘೋಷಿಸಿಕೊಂಡಿದ್ದು 5 ನೇ ತರಗತಿಯಿಂದ 12 ನೇ ತರಗತಿಯವರೆಗೂ ಓದಿರುವುದಾಗಿ ಹೇಳಿದ್ದಾರೆ.

ನವದೆಹಲಿ: ಎಂಸಿಡಿಗೆ ಆಯ್ಕೆಯಾದ 250 ಕೌನ್ಸಿಲರ್ ಗಳ ಪೈಕಿ ಶೇ.51 ರಷ್ಟು ಮಂದಿ ತಮ್ಮ ವಿದ್ಯಾರ್ಹತೆಯನ್ನು ಘೋಷಿಸಿಕೊಂಡಿದ್ದು 5 ನೇ ತರಗತಿಯಿಂದ 12 ನೇ ತರಗತಿಯವರೆಗೂ ಓದಿರುವುದಾಗಿ ಹೇಳಿದ್ದಾರೆ.
ಶೇ.66 ರಷ್ಟು ಮಂದಿ 41 - 70 ರ ವಯಸ್ಸಿನವರಾಗಿದ್ದಾರೆ ಎಂದು ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ಹೇಳಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಹಾಗು ದೆಹಲಿ ಚುನಾವಣಾ ಕಾವಲು ಸಂಸ್ಥೆ 248 ವಿಜೇತ ಅಭ್ಯರ್ಥಿಗಳ ಸ್ವಘೋಷಿತ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿದೆ.
ಇನ್ನು ಇಬ್ಬರು ವಿಜೇತ ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಸ್ಪಷ್ಟವಾದ ಪ್ರಮಾಣಪತ್ರ ಇಲ್ಲದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗಿಲ್ಲ. 248 ಅಭ್ಯರ್ಥಿಗಳ ಪೈಕಿ 132 ಅಭ್ಯರ್ಥಿಗಳು (ಶೇ.53 ರಷ್ಟು) ಅಭ್ಯರ್ಥಿಗಳು ಮಹಿಳೆಯರಾಗಿದ್ದು, ಆಮ್ ಆದ್ಮಿ ಪಕ್ಷದ ಸುಲ್ತಾನ್ ಪುರಿ-ಎ ವಾರ್ಡ್ ಕೌನ್ಸಿಲರ್ ಬಾಬಿ ತೃತೀಯ ಲಿಂಗಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


