ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲದ ಎರಡು ಪಟ್ಟಣಗಳಿಗೆ 'ಸ್ವಚ್ಛ ವಾಯು ಸರ್ವೇಕ್ಷಣ್' ಪ್ರಶಸ್ತಿ
ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲ ಪ್ರದೇಶದ ಸುಂದರನಗರ ಮತ್ತು ನಲಗಢ ಪಟ್ಟಣ 2022ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ವಾಯು ಸರ್ವೇಕ್ಷಣ್ ಪ್ರಶಸ್ತಿ ಪಡೆದುಕೊಂಡಿವೆ.

ಶಿಮ್ಲಾ: ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲ ಪ್ರದೇಶದ ಸುಂದರನಗರ ಮತ್ತು ನಲಗಢ ಪಟ್ಟಣ 2022ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ವಾಯು ಸರ್ವೇಕ್ಷಣ್ ಪ್ರಶಸ್ತಿ ಪಡೆದುಕೊಂಡಿವೆ.
ರಾಷ್ಟ್ರೀಯ ಸ್ವಚ್ಛ ವಾಯು ಯೋಜನೆಯಿಂದ ನೀಡುವ ಈ ಪ್ರಶಸ್ತಿಯಲ್ಲಿ ಸುಂದರನಗರ ಎರಡನೇ ಸ್ಥಾನ ಪಡೆದಿದ್ದರೆ, ನಲಗಢ ಪಟ್ಟಣ ಮೂರನೇ ಸ್ಥಾನ ಪಡೆದಿದೆ.
ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಮತ್ತು ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಅವರು ಶನಿವಾರ ಭುವನೇಶ್ವರದಲ್ಲಿ ‘ವಾಯು’ ಎಂಬ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಹಿಮಾಚಲ ಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಮನೋಜ್ ಚೌಹಾಣ್ ಎರಡು ಪಟ್ಟಣಗಳಿಗೆ ಕ್ರಮವಾಗಿ 25 ಲಕ್ಷ ಹಾಗೂ 12.5 ಲಕ್ಷ ರೂಪಾಯಿ ನಗದು ಪ್ರಶಸ್ತಿಯನ್ನು ರಾಜ್ಯದ ಪರವಾಗಿ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


