ದೇಶ

50 ಕಿ.ಮೀ, 16 ಕ್ಷೇತ್ರಗಳು: ಗುಜರಾತ್ ನಲ್ಲಿ ಅತಿ ದೊಡ್ಡ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ 2 ನೇ ಹಂತದ ಮತದಾನಕ್ಕೆ ಡಿ.01 ರಂದು ಅತ್ಯಂತ ದೀರ್ಘವಾದ ರೋಡ್ ಶೋ ನಡೆಸಿದ್ದಾರೆ.

50 ಕಿ.ಮೀ, 16 ಕ್ಷೇತ್ರಗಳು: ಗುಜರಾತ್ ನಲ್ಲಿ ಅತಿ ದೊಡ್ಡ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ರೋಡ್ ಶೋ
Published On :

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ 2 ನೇ ಹಂತದ ಮತದಾನಕ್ಕೆ ಡಿ.01 ರಂದು ಅತ್ಯಂತ ದೀರ್ಘವಾದ ರೋಡ್ ಶೋ ನಡೆಸಿದ್ದಾರೆ.

ಭಾರತೀಯ ರಾಜಕಾರಣಿಯೊಬ್ಬರು ಈವರೆಗೂ ನಡೆಸಿರುವ ಅತಿ ದೊಡ್ಡ ರೋಡ್ ಶೋ ಇದಾಗಿದ್ದು, ಪ್ರಧಾನಿ ಮೋದಿ ತಮ್ಮ ತವರಿನಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ 16 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. 

ಗುಜರಾತ್ ನ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಸತತ 7 ನೇ ಬಾರಿಗೆ ಅಧಿಕಾರಕ್ಕೇರಿ ದಾಖಲೆ ನಿರ್ಮಿಸುವ ತವಕದಲ್ಲಿದೆ.

ನರೋಡಾ ಗಾಮ್ ನಿಂದ ಪ್ರಾರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ 50 ಕಿ.ಮೀ ವ್ಯಾಪ್ತಿಯ ರೋಡ್ ಶೋ ಪ್ರಾರಂಭವಾಗಿ, ಗಾಂಧಿನಗರದಲ್ಲಿ ಅಂತ್ಯಗೊಂಡಿತು. ಸತತ 4 ಗಂಟೆಗಳ ಕಾಲ ಈ ರೋಡ್ ಶೋ ನಡೆದಿದೆ. ಈ ಚುನಾವಣೆಯಲ್ಲಿ ಈ ರೋಡ್ ಶೋ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ಪಕ್ಷದ ಬಾವುಟ ಹಿಡಿದು ಸಾವಿರಾರು ಮಂದಿ ಕಾರ್ಯಕರ್ತರು ಈ ದಾರಿಯಲ್ಲಿ ಹೆಜ್ಜೆ ಹಾಕಿದರು. ಬಿಜೆಪಿಯ ಪ್ರಕಾರ ಇದು ಯಾವುದೇ ರಾಜಕಾರಣಿ ನಡೆಸಿದ ಅತಿ ದೊಡ್ಡ ರೋಡ್ ಶೋ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.