ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ ಜಿಯೋ 5 ಜಿ: ಅಂಬಾನಿ
ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5 ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ಮುಂಬೈ: ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5 ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.
5ಜಿ ಟೆಲಿಫೋನಿ ಸೇವೆಗಳನ್ನು ನಿಯೋಜಿಸುವುದಕ್ಕಾಗಿ ಅಂಬಾನಿ ಸೋಮವಾರದಂದು 2 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದರು.
ದೇಶದ ಅತಿ ದೊಡ್ಡ ಆಪರೇಟರ್ ಆಗಿರುವ ಜಿಯೋ, ಈಗಿರುವ 4 ಜಿ ನೆಟ್ವರ್ಕ್ ನ್ನು ನವೀಕರಿಸುವ ಬದಲು ಸ್ವತಂತ್ರ 5G ಸ್ಟಾಕ್ ನ್ನು ನಿಯೋಜಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ 45 ನೇ ಎಜಿಎಂ ನಲ್ಲಿ ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ಗೆ ಪುತ್ರಿ ಇಶಾ ಮುಖ್ಯಸ್ಥೆ ಎಂದು ಘೋಷಿಸಿದ ಮುಖೇಶ್ ಅಂಬಾನಿ!
ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಗಳಲ್ಲಿ 5 ಜಿ ಸೇವೆ ಜಾರಿಗೆ ಬರಲಿದೆ ಎಂದು ಅಂಬಾನಿ ತಿಳಿಸಿದ್ದು, 2023 ರ ವೇಳೆಗೆ 18 ತಿಂಗಳಲ್ಲಿ ಇಡೀ ಭಾರತದ ನಗರಗಳಲ್ಲಿ 5 ಜಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


