ದೇಶ

ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ರೂ. ‌ವೆಚ್ಚ ಮಾಡುತ್ತಿದೆ: ಕೇಜ್ರಿವಾಲ್

ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ವೆಚ್ಚ ಮಾಡದಿದ್ದರೆ ಕೇಂದ್ರ ಸರ್ಕಾರ ಆಹಾರದ ಪದಾರ್ಥಗಳ ಮೇಲೆ ಜಿಎಸ್ ಟಿ ವಿಧಿಸುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ರೂ. ‌ವೆಚ್ಚ ಮಾಡುತ್ತಿದೆ: ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ವೆಚ್ಚ ಮಾಡದಿದ್ದರೆ ಕೇಂದ್ರ ಸರ್ಕಾರ ಆಹಾರದ ಪದಾರ್ಥಗಳ ಮೇಲೆ ಜಿಎಸ್ ಟಿ ವಿಧಿಸುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ ಎಂದು ಕರೆದ ಮಾರನೇ ದಿನ ಕೇಜ್ರಿವಾಲ್ ಈ ರೀತಿಯ ಆರೋಪ ಮಾಡಿದ್ದಾರೆ.

ದೆಹಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಜಿಎಸ್ ಟಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಸಂಗ್ರಹಿಸಿದ ಹಣವನ್ನು ಶಾಸಕರ ಖರೀದಿಗೆ ಬಳಸಿಕೊಳ್ಳುತ್ತಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಇತರ ಪಕ್ಷಗಳ ಶಾಸಕರ ಖರೀದಿಗೆ ಬಿಜೆಪಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ ಎಂದು ಅವರು ಟೀಕಿಸಿದರು. 

ಮೊಸರು, ಬೆಣ್ಣೆ, ತುಪ್ಪ, ಗೋಧಿ, ಅಕ್ಕಿ ಮತ್ತಿತರ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸಿ, ವರ್ಷಕ್ಕೆ 7.500 ಕೋಟಿ ರೂ. ಆದಾಯವನ್ನು ಕೇಂದ್ರ ಸರ್ಕಾರ ಸಂಗ್ರಹಿಸಲಿದೆ. ಸರ್ಕಾರಗಳ ಪತನಕ್ಕೆ ಇಲ್ಲಿಯವರೆಗೂ ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಅವರು ಸರ್ಕಾರಗಳನ್ನು ಉರುಳಿಸದಿದ್ದರೆ ಗೋಧಿ, ಅಕ್ಕಿ, ಮಜ್ಜಿಗೆ ಇತ್ಯಾದಿಗಳ ಮೇಲೆ ಜಿಎಸ್‌ಟಿ ಹೇರಬೇಕಾಗುತ್ತಿರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗಿರಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.