ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ಖಂಡಿಸಿದ ಭಾರತ
ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಭಾರತ ಗುರುವಾರ ತನ್ನ ಮೊದಲ ಪ್ರತಿಕ್ರಿಯೆಯಾಗಿ 'ಭಯಾನಕ ದಾಳಿ'ಯನ್ನು ಖಂಡಿಸಿದೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

ನವದೆಹಲಿ: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಭಾರತ ಗುರುವಾರ ತನ್ನ ಮೊದಲ ಪ್ರತಿಕ್ರಿಯೆಯಾಗಿ 'ಭಯಾನಕ ದಾಳಿ'ಯನ್ನು ಖಂಡಿಸಿದೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ಆಗಸ್ಟ್ 12 ರಂದು ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಶನ್‌ನಲ್ಲಿ ಉಪನ್ಯಾಸ ನೀಡಲು ಹೋಗಿದ್ದ ರಶ್ದಿ ಅವರ ಕುತ್ತಿಗೆ ಮತ್ತು ಮುಂಡಕ್ಕೆ ದುಷ್ಕರ್ಮಿಗಳು ಇರಿದಿದ್ದರು.
'ಭಾರತವು ಯಾವಾಗಲೂ ಹಿಂಸೆ ಮತ್ತು ಉಗ್ರವಾದದ ವಿರುದ್ಧ ನಿಂತಿದೆ. ನಾವು ಸಲ್ಮಾನ್ ರಶ್ದಿ ಅವರ ಮೇಲಿನ ಭೀಕರ ದಾಳಿಯನ್ನು ಖಂಡಿಸುತ್ತೇವೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಮ್ಮ ವಾರದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ಮಾಡುತ್ತಿರುವಾಗ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. ಹಾದಿ ಮತರ್ ಎಂಬ 24 ವರ್ಷದ ಯುವಕ ರಶ್ದಿ ಮೇಲೆ ದಾಳಿ ನಡೆಸಿದ್ದನು.
Related Article
ಸಲ್ಮಾನ್ ರಶ್ದಿ ಜೀವಂತ, ಪರಿಸ್ಥಿತಿ ಮೇಲ್ವಿಚಾರಣೆ: ನ್ಯೂಯಾರ್ಕ್ ಗವರ್ನರ್
ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ: ಪರಿಸ್ಥಿತಿ ಗಂಭೀರ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ, ದಾಳಿಕೋರನ ಬಂಧನ
ಸಲ್ಮಾನ್ ರಶ್ದಿಗೆ ಚಾಕು ಇರಿತ: ಪುಸ್ತಕಗಳು ಮತ್ತು ವಿವಾದಗಳು; ವಿವಾದಿತ ಲೇಖಕ ಹತ್ತು ವರ್ಷ ಭೂಗತ!
ಮುಸ್ಲಿಮ್ ಕಾನೂನು ಬಹುತೇಕ ಕುರಾನ್ ಆಧಾರಿತವಲ್ಲ: ಸಲ್ಮಾನ್ ರಶ್ದಿ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್
ಲೇಖಕ ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ: ವೆಂಟಿಲೇಟರ್ ನಿಂದ ಬಿಡುಗಡೆ!
ಸಲ್ಮಾನ್ ರಶ್ದಿ ಮೇಲಿನ ದಾಳಿಯಲ್ಲಿ ಭಾಗಿ: ಆರೋಪ ನಿರಾಕರಿಸಿದ ಇರಾನ್
ಸಲ್ಮಾನ್ ರಶ್ದಿ ಮೇಲಿನ ದಾಳಿ 'ಭಯಾನಕ ಮತ್ತು ದುಃಖಕರ': ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


