ಇತಿಹಾಸದಲ್ಲಿ ಇದೇ ಮೊದಲು: ಗ್ಲ್ಯಾಸ್ಗೋ ಜೊತೆ ಒಪ್ಪಂದ; ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳು ಭಾರತಕ್ಕೆ ರವಾನೆ
ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ.

ಎಡಿನ್ ಬರ್ಗ್: ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ.
ಹೌದು.. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವು ಭಾರತಕ್ಕೆ ಏಳು ಕಲಾಕೃತಿಗಳನ್ನು ನೀಡುತ್ತಿದ್ದು, ಕಳವಾಗಿದ್ದ ವಸ್ತುಗಳನ್ನು ಮರಳಿಸುವಿಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
14ನೇ ಶತಮಾನದ ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಬ್ರಿಟನ್ ನಿಂದ ಮೊದಲ ಬಾರಿಗೆ ಸ್ವದೇಶಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ. ಗ್ಲ್ಯಾಸ್ಗೋ ಲೈಫ್ ನಗರದ ವಸ್ತುಸಂಗ್ರಹಾಲಯಗಳನ್ನು ನಡೆಸುವ ದತ್ತಿ ಸಂಸ್ಥೆಯಾಗಿದೆ. ಇದು ಈ ವರ್ಷದ ಆರಂಭದಲ್ಲಿ ಹಸ್ತಾಂತರವನ್ನು ದೃಢಪಡಿಸಿತು ಎನ್ನಲಾಗಿದೆ.
ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಆರು ವಸ್ತುಗಳನ್ನು 14ನೇ ಶತಮಾನದ ಕೆತ್ತನೆಗಳು ಮತ್ತು 11ನೇ ಶತಮಾನದ ಕಲ್ಲಿನ ಬಾಗಿಲು ಜಾಮ್ಗಳನ್ನು ಒಳಗೊಂಡಿವೆ. ಅವುಗಳನ್ನು 19ನೇ ಶತಮಾನದಲ್ಲಿ ದೇವಾಲಯಗಳಿಂದ ಕದಿಯಲಾಗಿತ್ತು. ಏಳನೆಯ ವಸ್ತುವು ವಿಧ್ಯುಕ್ತ ಖಡ್ಗವಾಗಿದೆ ಮತ್ತು 1905 ರಲ್ಲಿ ಹೈದರಾಬಾದಿನ ನಿಜಾಮರ ಸಂಗ್ರಹದಿಂದ ಅವರ ಪ್ರಧಾನ ಮಂತ್ರಿಯಿಂದ ಕದಿಯಲಾಗಿದೆ ಎಂದು ತಿಳಿದು ಬಂದಿದೆ.
ಸುಮಾರು ಏಳು ಐತಿಹಾಸಿಕ ಕಲಾಕೃತಿಗಳು ಭಾರತದಿಂದ ಕಳುವಾಗಿದ್ದವು. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವೊಂದು 14 ನೇ ಶತಮಾನದ ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಸ್ವದೇಶಕ್ಕೆ ಹಿಂದಿರುಗಿಸಲು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಬಿಜೆಪಿ ಮಾಹಿತಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


