ಎಎಪಿ ಶಾಸಕರ ಭೇಟಿ: 'ರಾಜ್ ಘಾಟ್' ಶುದ್ಧೀಕರಣ ಕಾರ್ಯಕ್ಕೆ ಬಿಜೆಪಿ ಕಾರ್ಯಕರ್ತರು ಮುಂದು
ಅಬಕಾರಿ ನೀತಿ ಸುತ್ತ ಎದ್ದಿರುವ ವಿವಾದಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಆಮ್ ಆದ್ಮಿ ಪಕ್ಷದ ಮುಖಂಡರು ರಾಜ್ ಘಾಟ್ ಗೆ ಭೇಟಿ ನೀಡಿರುವುದಾಗಿ ಗುರುವಾರ ಹೇಳಿರುವ ಬಿಜೆಪಿ, ತನ್ನ ಕಾರ್ಯಕರ್ತರು ಗಂಗಾ ಜಲವನ್ನು ಸಿಂಪಡಿಸಿ ಮಹಾತ್ಮ ಗಾಂಧಿಯ ಸಮಾಧಿಯನ್ನು ಶುದ್ಧೀಕರಿಸಲಿದ್ದಾರೆ ಎಂದು ಹೇಳಿದೆ.

ನವದೆಹಲಿ: ಅಬಕಾರಿ ನೀತಿ ಸುತ್ತ ಎದ್ದಿರುವ ವಿವಾದಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಆಮ್ ಆದ್ಮಿ ಪಕ್ಷದ ಮುಖಂಡರು ರಾಜ್ ಘಾಟ್ ಗೆ ಭೇಟಿ ನೀಡಿರುವುದಾಗಿ ಗುರುವಾರ ಹೇಳಿರುವ ಬಿಜೆಪಿ, ತನ್ನ ಕಾರ್ಯಕರ್ತರು ಗಂಗಾ ಜಲವನ್ನು ಸಿಂಪಡಿಸಿ ಮಹಾತ್ಮ ಗಾಂಧಿಯ ಸಮಾಧಿಯನ್ನು ಶುದ್ಧೀಕರಿಸಲಿದ್ದಾರೆ ಎಂದು ಹೇಳಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಸುದಾಂಶು ತ್ರಿವೇದಿ, ಅಬಕಾರಿ ನೀತಿ ವಿಚಾರದಲ್ಲಿ ಪಾರದರ್ಶಕವಾಗಿ ಬರುವಂತೆ ಬಿಜೆಪಿ ನಿರಂತರವಾಗಿ ಎಎಪಿಗೆ ಹೇಳುತ್ತಿದೆ. ಆದರೆ, ಅರವಿಂದ್ ಕೇಜ್ರಿವಾಲ್ ಜನರ ಗಮನವನ್ನು ಬೇರೆಡೆ ಸೆಳೆಯಲು ಒಂದಲ್ಲಾ ಒಂದು ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು.
ಎಎಪಿ ಮುಖಂಡರು ಮಹಾತ್ಮ ಗಾಂಧಿ ಸಮಾಧಿ ಬಳಿಗೆ ಹೋಗಿದ್ದಾರೆ ಎಂದರೆ ನಿಜವಾಗಿಯೂ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬರ್ಥ ಬರುತ್ತಿದೆ. ಆದ್ದರಿಂದ ಅದನ್ನು ಶುದ್ದೀಕರಿಸಲು ಬಿಜೆಪಿ ಕಾರ್ಯಕರ್ತರು ಸಮಾಧಿಗೆ ಗಂಗಾ ಜಲ ಸಿಂಪಡಿಸಲಿದ್ದಾರೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


