ವೈದ್ಯರು ಹಾಗೂ ವ್ಯವಸ್ಥೆಯನ್ನು ಬಾಬಾ ರಾಮ್ ದೇವ್ ನಿಂದಿಸುವಂತಿಲ್ಲ; ಸುಪ್ರೀಂ ಕೋರ್ಟ್
ಅಲೋಪತಿ ವೈದ್ಯರನ್ನು ಹಂತಕರು ಎಂದು ಆರೋಪಿಸಿದ್ದ, ಬಾಬಾ ರಾಮ್ ದೇವ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: ಅಲೋಪತಿ ವೈದ್ಯರನ್ನು ಹಂತಕರು ಎಂದು ಆರೋಪಿಸಿದ್ದ, ಬಾಬಾ ರಾಮ್ ದೇವ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೋರ್ಟ್, ಯೋಗವನ್ನು ಬಾಬಾ ರಾಮ್ ದೇವ್ ಅವರು ಪ್ರಸಿದ್ಧಗೊಳಿಸಿದ್ದಾರೆ ಎಂಬ ವಾಸ್ತವವನ್ನು ಒಪ್ಪಿಕೊಂಡೇ, ಆಯುರ್ವೇದ ಪ್ರತಿ ಬಾರಿಯೂ ಕೆಲಸ ಮಾಡಬೇಕಿಲ್ಲ ಹಾಗೂ ವೈದ್ಯರು, ವ್ಯವಸ್ಥೆಯನ್ನು ಅವರು ನಿಂದಿಸುವಂತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಬಾಬಾ ರಾಮ್ ದೇವ್ ಅವರಿಗೇನಾಗಿದೆ? ನಾವು ಅವರನ್ನೇಕೆ ಪ್ರಸಿದ್ಧಗೊಳಿಸಬೇಕು? ನಾವು ಅವರನ್ನು ಗೌರವಿಸುತ್ತೇವೆ. ಅವರು ಯೋಗವನ್ನು ಪ್ರಸಿದ್ಧಗೊಳಿಸಿದರು, ಆದರೆ ಬೇರೆ ವ್ಯವಸ್ಥೆಗಳನ್ನು ಅವರು ಟೀಕಿಸುವಂತಿಲ್ಲ. ಆಯುರ್ವೇದವೇ ಗುಣಪಡಿಸುತ್ತದೆ ಎಂಬುದಕ್ಕೆ ಏನು ಖಾತ್ರಿ ಇದೆ? ಅವರ ಎಲ್ಲಾ ಜಾಹಿರಾತುಗಳು ಅಲೋಪತಿ ವೈದ್ಯರನ್ನು ಹಂತಕರು ಎಂದೇ ಆರೋಪಿಸುತ್ತದೆ. ಅವರು ಆ ರೀತಿ ವೈದ್ಯರು ಹಾಗೂ ವ್ಯವಸ್ಥೆಯನ್ನು ಟೀಕಿಸುವಂತಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ದೇಶಾದ್ಯಂತ ಅಲೋಪತಿ ವೈದ್ಯಕೀಯ ಪದ್ಧತಿ, ಲಸಿಕೆ ಅಭಿಯಾನದ ವಿರುದ್ಧ ಸೆಮಿನಾರ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಐಎಂಎ ಬಾಬಾ ರಾಮ್ ದೇವ್ ವಿರುದ್ಧ ಆರೋಪಿಸಿತ್ತು. ಆಯುಷ್ ನ್ನು ಉತ್ತೇಜಿಸಲು ಅಲೋಪತಿ ವ್ಯವಸ್ಥೆಯನ್ನು ಅವಹೇಳನ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ, ಎಎಸ್ ಸಿಐ, ಸಿಸಿಪಿಎಗೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಹಾಗೂ ಪತಂಜಲಿ ಆಯುರ್ವೇದಕ್ಕೆ ಸಿಜೆಐ ಅವರಿದ್ದ ಪೀಠ ನೊಟೀಸ್ ಜಾರಿಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


