ತಮ್ಮ ಬೆಂಬಲಿಗರಿಂದ 5 ಮಂದಿಯ ಗುಂಪು ಹತ್ಯೆ ಒಪ್ಪಿಕೊಂಡ ಬಿಜೆಪಿ ಮುಖಂಡನ ವೀಡಿಯೋ ವೈರಲ್!
ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ, ತಮ್ಮ ಬೆಂಬಲಿಗರು 5 ಮಂದಿಯನ್ನು ಗುಂಪು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ಜೈಪುರ: ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ, ತಮ್ಮ ಬೆಂಬಲಿಗರು 5 ಮಂದಿಯನ್ನು ಗುಂಪು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.ರಾಜಸ್ಥಾನ ಕಾಂಗ್ರೆಸ್ ಮುಖಂಡ ಗೋವಿಂದ್ ಸಿಂಗ್ ದೊಸ್ತಾರ ಟ್ವಿಟರ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
45 ವರ್ಷದ ಚಿರಣ್ಜಿ ಲಾಲ್ ಸೈನಿ ಎಂಬಾತನನ್ನು ಟ್ರ್ಯಾಕ್ಟರ್ ಕಳ್ಳತನ ಮಾಡಿದ ಶಂಕೆಯಲ್ಲಿ ಮೇವ್ ಮುಸ್ಲಿಮ್ ಸಮುದಾಯದ ಸದಸ್ಯರು ಗೋವಿಂದಗಢದಲ್ಲಿ ಗುಂಪು ಹತ್ಯೆ ಮಾಡಿದ್ದರು.
ಈ ರೀತಿ ಗುಂಪು ಹತ್ಯೆ ಮಾಡಿದವರ ವಿರುದ್ಧ ಹೋರಾಟಕ್ಕೆ ಜನರಿಗೆ ಕರೆ ನೀಡುತ್ತಿದ್ದ ಭಾಷಣಕಾರನ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿ ನಾಯಕ ಗುಂಪು ಹತ್ಯೆ ಬಗ್ಗೆ ಮಾತನಾಡಿದ್ದಾರೆ.
ಸ್ಥಳೀಯ ಆರ್ ಎಸ್ ಎಸ್ ನಾಯಕ ಚಿರಣ್ಜಿ ಲಾಲ್ ಸೈನಿ ಗುಂಪು ಹತ್ಯೆಯನ್ನು ಖಂಡಿಸಲು ಆಂದೋಲನ ನಡೆಸಬೇಕೆಂದು ಆಗ್ರಹಿಸಿದಾಗ, ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ನಾವು ಈ ವರೆಗೂ ಲಾವಂಡಿಯಲ್ಲಿ 5 ಮಂದಿಯನ್ನು ಗುಂಪು ಹತ್ಯೆ ಮಾಡಿದ್ದೇವೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದ್ದು, ಅವರು ಒಬ್ಬರನ್ನು ಗುಂಪು ಹತ್ಯೆ ಮಾಡಿದ್ದಾರೆ ಎಂದು ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ನಾಯಕನ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪಕ್ಷ ಇದು ಅವರ ವೈಯಕ್ತಿಕ ಹೇಳಿಕೆ ಪಕ್ಷ ಈ ರೀತಿಯ ಆಲೋಚನೆಗಳನ್ನು ಹೊಂದಿಲ್ಲ ಎಂದು ಹೇಳಿದೆ. ಇನ್ನು ಮಾಜಿ ಶಾಸಕನನ್ನು ಸಂಪರ್ಕಿಸಿದಾಗ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಗೋಹತ್ಯೆ ಹಾಗೂ ಗೋಕಳ್ಳಸಾಗಣೆಯಲ್ಲಿ ತೊಡಗಿರುವವರನ್ನು ನಾವು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


