'ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳು ಮುಕ್ತ': ಜೆಡಿಯು ಮಾಜಿ ಅಧ್ಯಕ್ಷ ಆರ್‌ಸಿಪಿ ಸಿಂಗ್
ಬಿಹಾರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದ್ದೇನೆ" ಎಂದು ಗುರುವಾರ ಹೇಳಿದ್ದಾರೆ.

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದ್ದೇನೆ" ಎಂದು ಗುರುವಾರ ಹೇಳಿದ್ದಾರೆ.
ಬಿಜೆಪಿ ಜತೆ ಮೈತ್ರಿ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ "ಮಹಾಘಟಬಂಧನ್" ನೊಂದಿಗೆ ಮತ್ತೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಕೇಂದ್ರ ಸಚಿವ, ಜೆಡಿಯು ಹಿರಿಯ ನಾಯಕ ಆರ್ ಸಿಪಿ ಸಿಂಗ್, ಅವರು ಈ ಜನ್ಮ ಅಲ್ಲ ಇನ್ನೂ ಏಳು ಜನ್ಮ ಎತ್ತಿದರೂ ಪ್ರಧಾನಿಯಾಗಲ್ಲ ಎಂದಿದ್ದಾರೆ.
ನೀವು ಬಿಜೆಪಿ ಸೇರಲು ಬಯಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ಯಾಕೆ ಸೇರಬಾರದು? "ನನಗೆ ಎಲ್ಲಾ ಆಯ್ಕೆಗಳಿವೆ" ಎಂದು ಹೇಳಿದರು.
ಜೆಡಿಯು ಮತ್ತೊಂದು ಅವಧಿಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದ ನಂತರ ಆರ್ ಸಿಪಿ ಸಿಂಗ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಚಂದ್ರಶೇಖರ್, ಎಚ್ ಡಿ ದೇವೇಗೌಡ, ಐ ಕೆ ಗುಜರಾಲ್ ಮುಂತಾದವರು ಪ್ರಧಾನಿಯಾಗಿ ಅಲ್ಪಾವಧಿಯ ಆನಂದ ಅನುಭವಿಸಿದಂತಹ ರಾಜಕೀಯ ಅಸ್ಥಿರತೆ ಈಗ ದೇಶದಲ್ಲಿ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


