ದೇಶ

ವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರು

ಬುಡಕಟ್ಟು ಜನಾಂಗದ ಹೊರತಾದ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ಗ್ರಾಮಸ್ಥರು ವಿಕೃತಿ ಮೆರೆದ ಘಟನೆ ರಾಂಚಿಯ ಮಯೂ ನಾಚ ಗ್ರಾಮದಲ್ಲಿ ನಡೆದಿದೆ.

ವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರು
ಸಾಂಕೇತಿಕ ಚಿತ್ರ
Published On :

ರಾಂಚಿ: ಬುಡಕಟ್ಟು ಜನಾಂಗದ ಹೊರತಾದ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ (ಮೆರವಣಿಗೆ) ಮಾಡಿ ಗ್ರಾಮಸ್ಥರು ವಿಕೃತಿ ಮೆರೆದ ಘಟನೆ ರಾಂಚಿಯ ಮಯೂ ನಾಚ ಗ್ರಾಮದಲ್ಲಿ ನಡೆದಿದೆ. 

ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪ್ರಧಾನ ಹಾಗೂ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪುರುಷನೋರ್ವ ಮಹಿಳೆಯನ್ನು ಭೇಟಿ ಮಾಡಲು ತಡ ರಾತ್ರಿ ಹೋಗಿದ್ದ ಈ ವೇಳೆ ಗ್ರಾಮಸ್ಥರು ಇಬ್ಬರನ್ನೂ ಹಿಡಿದು,  ನಗ್ನಗೊಳಿಸಿ ಗ್ರಾಮದ ಪೂರ್ತಿ ಮೆರವಣಿಗೆ ಮಾಡಿದ್ದಾರೆ.

ಮಹಿಳೆ ಹಾಗೂ ಪುರುಷ ಇಬ್ಬರೂ ದಿನಗೂಲಿ ನೌಕರರಾಗಿದ್ದು, ಒಂದೇ ಗ್ರಾಮದವರಾಗಿದ್ದಾರೆ. "ಪೊಲೀಸರು 4 ಮಂದಿ ಹಾಗೂ ಇನ್ನೂ 50 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಗ್ರಾಮ ಪ್ರಧಾನ ಹಾಗೂ ಗ್ರಾಮಸ್ಥರು ಮಹಿಳೆಯರನ್ನು ಭೇಟಿ ಮಾಡಲು ತೆರಳಿದ್ದ ಪುರುಷರನ್ನು ಹಿಡಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪ್ರಧಾನರೂ ಸೇರಿದಂತೆ 6 ಮಂದಿಯನ್ನು ಈ ವರೆಗೂ ಬಂಧಿಸಲಾಗಿದೆ. ಮಹಿಳೆ ಹಾಗೂ ಪುರುಷನಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.