ಫೈನಾನ್ಸ್ ಸಾಲ ತೀರಿಸಲು 2,000 ರೂ. ಕೊಡದ ಸ್ನೇಹಿತರು, ಸಂಬಂಧಿಕರು: ಮನನೊಂದು ಯುವಕ ಆತ್ಮಹತ್ಯೆ
ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ. ಆದರೆ ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡಲಿಲ್ಲ ಎಂದು ಮನನೊಂದ ಯುವಕ ಇಹಲೋಕವನ್ನೇ ತ್ಯಜಿಸಿದ್ದಾನೆ.

ಮೆಡ್ಚಲ್: ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ. ಆದರೆ ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡಲಿಲ್ಲ ಎಂದು ಮನನೊಂದ ಯುವಕ ಇಹಲೋಕವನ್ನೇ ತ್ಯಜಿಸಿದ್ದಾನೆ. ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಶಮೀರ್ಪೇಟೆ ಮಂಡಲದ ಪೊನ್ನಾಲದಲ್ಲಿ ಈ ದುರಂತ ಸಂಭವಿಸಿದೆ.
ಏನಿದು ಘಟನೆ? ಮರ್ಯಾಲ ಆನಂದ್(23) ಸಾವಿಗೀಡಾದವ. ಈತ ತರ್ಕಪಲ್ಲಿಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ. 3 ತಿಂಗಳ ಹಿಂದೆ ಸಿದ್ದಿಪೇಟೆ ಜಿಲ್ಲೆಯ ಗಜವೇಲ್ ಮಂಡಲದ ಕುಂಚೇರುಕಲಿ ಮೈಕ್ರೋ ಫೈನಾನ್ಸ್ ನಿಂದ 10,000 ರೂ. ಸಾಲ ಪಡೆದಿದ್ದಾನೆ. ಈ ಸಾಲದ ಹಿನ್ನೆಲೆ ಅದರ ಮರುಪಾವತಿಗೆ ಅ.22 ರಂದು ಆನಂದ್ ಮನೆಗೆ ಫೈನಾನ್ಸ್ ನ ಓರ್ವ ಮಹಿಳೆ ಮತ್ತು 5 ಮಂದಿ ಭೇಟಿ ನೀಡಿ ಸಾಲ ಪಾವತಿ ಮಾಡುವಂತೆ ಹೇಳಿದ್ದಾರೆ.
ಈಗ ನನ್ನ ಬಳಿ ಇಲ್ಲ. ಆದಷ್ಟು ಬೇಗ ಕಟ್ಟುತ್ತೇನೆ ಎಂದು ಹೇಳಿದ್ದಾನೆ. ಆದರೆ ಅವರು ಈಗಲೇ ಕಟ್ಟುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಆನಂದ್ ಕೆಲ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹಣ ಕೇಳಿದ್ದಾನೆ. ಆದರೆ ಯಾರು ಕೊಡಲು ಮುಂದಾಗದ ಕಾರಣ ಆನಂದ್ 2 ಸಾವಿರ ರೂಪಾಯಿಗೆ ನನ್ನನ್ನು ಯಾರು ನಂಬುತ್ತಿಲ್ಲವಲ್ಲ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


