ಚೀನಾ ಸೇನೆಯ ದಾಳಿಗೆ ಸಜ್ಜು: ಭಾರತೀಯ ಯೋಧರು ಗಡಿ ಬಳಿ ಯಾವ ರೀತಿ ತರಬೇತಿ ಪಡೆಯುತ್ತಿದ್ದಾರೆ ವಿಡಿಯೊ ನೋಡಿ!
ಭಾರತ ಮತ್ತು ಚೀನಾ ಗಡಿ ನಡುವೆ ಉದ್ವಿಗ್ನತೆ ಮತ್ತೆ ತಲೆದೋರುವ ಲಕ್ಷಣ ಕಾಣುತ್ತಿದೆ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡಾ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರತ ಈಗ ಚೀನಾದ ಗಡಿಯಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದೇ ಕರೆಯಲ್ಪಡುವ ಬೋಫೋರ್ಸ್ ಗನ್‌ಗಳನ್ನ ನಿಯೋಜಿಸಿದೆ.

ಲಡಾಕ್: ಭಾರತ ಮತ್ತು ಚೀನಾ ಗಡಿ ನಡುವೆ ಉದ್ವಿಗ್ನತೆ ಮತ್ತೆ ತಲೆದೋರುವ ಲಕ್ಷಣ ಕಾಣುತ್ತಿದೆ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡಾ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರತ ಈಗ ಚೀನಾದ ಗಡಿಯಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದೇ ಕರೆಯಲ್ಪಡುವ ಬೋಫೋರ್ಸ್ ಗನ್‌ಗಳನ್ನ ನಿಯೋಜಿಸಿದೆ.
ಭಾರತೀಯ ಸೇನೆಯ ಸೈನಿಕರು ಅರುಣಾಚಲ ಪ್ರದೇಶದ ಪೂರ್ವ ವಲಯದ ಒರಟಾದ ಹವಾಮಾನ ಪರಿಸ್ಥಿತಿಗಳು ಮತ್ತು ಭೂಪ್ರದೇಶಗಳಲ್ಲಿ ಆಕ್ರಮಣಕಾರಿ ತರಬೇತಿ, ತೀವ್ರ ವ್ಯಾಯಾಮ, ಕಸರತ್ತು ಮತ್ತು ಏಕಾಗ್ರತೆಗಾಗಿ ಧ್ಯಾನದ ಮೊರೆ ಹೋಗುತ್ತಿದ್ದಾರೆ, ಅವರಿಗೆ ಅಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ.
ಭಾರತೀಯ ಸೈನಿಕರು ಚೀನಾದ ಕಡೆಯಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಡ್ರಿಲ್ ಕಾರ್ಯಾಚರಣೆಗಿಳಿದಿದ್ದು ಅದರ ಪ್ರದರ್ಶನ ನಡೆಸಿದರು.
ಭಾರತೀಯ ಸೈನಿಕರು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಶತ್ರು ಟ್ಯಾಂಕ್‌ಗಳನ್ನು ನಾಶಮಾಡಲು ಯುದ್ಧ ಕವಾಯತು ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


