ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ: ಹೊಸ ಉಗ್ರ ಸಂಘಟನೆಯ ಎಚ್ಚರಿಕೆ
ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ.

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶವನ್ನು ರೆಸಿಸ್ಟೆನ್ಸ್ ಫ್ರಂಟ್ ನೀಡಿದೆ.
ಟಿಆರ್ ಎಫ್ ನ ಉಗ್ರರನ್ನು ಬಂಧಿಸಲು ಎನ್ ಐಎ ಕೇಂದ್ರಾಡಳಿತ ಪ್ರದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ " ಇನ್ನೂ ತೀವ್ರವಾಗಿ, ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತೇವೆ" ಎಂದು ರೆಸಿಸ್ಟೆನ್ಸ್ ಫ್ರಂಟ್ ಎಚ್ಚರಿಸಿದೆ.
ಭದ್ರತಾ ಸಂಸ್ಥೆಗಳು ಈ ಎಚ್ಚರಿಕೆ ಸಂದೇಶವನ್ನೊಳಗೊಂಡ ಪತ್ರವನ್ನು ಹತಾಶಗೊಂಡಿರುವ ಉಗ್ರರು ಗಮನಸೆಳೆಯಲು ಯತ್ನಿಸುತ್ತಿರುವುದಾಗಿ ಎಂದು ಹೇಳಿವೆ. ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾ, ಟಿಆರ್ ಫ್ 2019 ರಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಾಣಿಸಿಕೊಂಡಿತ್ತು.
ಟಿಆರ್ ಫ್ ನ ಹಿಂಸಾಚಾರಕ್ಕೆ ಸೇನೆ ನೀಡಿದ್ದ ಪ್ರತಿಕ್ರಿಯೆಯಿಂದ ಉಗ್ರ ಸಂಘಟನೆಯನ್ನು ಹತಾಶಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ 8 ಮಂದಿ ಉಗ್ರರು ಹತರಾಗಿದ್ದಾರೆ. ಈ ಎಚ್ಚರಿಕೆ ಸಂದೇಶ ಹತಾಶಗೊಂಡಿರುವ ಉಗ್ರರ ಗಮನ ಸೆಳೆಯುವ ಯತ್ನವಾಗಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


