ದೇಶ

ವಂಡಲೂರು ಮೃಗಾಲಯದಲ್ಲಿನ ಕೋವಿಡ್-19 ಪಾಸಿಟಿವ್ ಸಿಂಹಗಳಲ್ಲಿ ಈಗ 'ಡಿಸ್ಟೆಂಪರ್ ವೈರಸ್' ದೃಢ!

ಕೋವಿಡ್ ತೊಂದರೆಗಳು ಸಾಕಾಗುವುದಿಲ್ಲ ಎಂಬಂತೆ, ಚೆನ್ನೈನ ಪ್ರಸಿದ್ಧ ಅರಿಗ್ನಾರ್ ಪ್ರಾಣಿ ಸಂಗ್ರಹಾಲಯದಲ್ಲಿ (ವಂಡಲೂರು ಪ್ರಾಣಿ ಸಂಗ್ರಹಾಲಯ) ಕೋವಿಡ್-19 ಸೋಂಕಿತ ಸಿಂಹಗಳಲ್ಲಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಡಿಸ್ಟೆಂಪರ್ ವೈರಸ್ ದೃಢಪಟ್ಟಿದೆ.

ವಂಡಲೂರು ಮೃಗಾಲಯದಲ್ಲಿನ ಕೋವಿಡ್-19 ಪಾಸಿಟಿವ್ ಸಿಂಹಗಳಲ್ಲಿ ಈಗ 'ಡಿಸ್ಟೆಂಪರ್ ವೈರಸ್' ದೃಢ!
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಕೋವಿಡ್ ತೊಂದರೆಗಳು ಸಾಕಾಗುವುದಿಲ್ಲ ಎಂಬಂತೆ, ಚೆನ್ನೈನ ಪ್ರಸಿದ್ಧ ಅರಿಗ್ನಾರ್ ಪ್ರಾಣಿ ಸಂಗ್ರಹಾಲಯದಲ್ಲಿ (ವಂಡಲೂರು ಪ್ರಾಣಿ ಸಂಗ್ರಹಾಲಯ) ಕೋವಿಡ್-19 ಸೋಂಕಿತ ಸಿಂಹಗಳಲ್ಲಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಡಿಸ್ಟೆಂಪರ್ ವೈರಸ್ ದೃಢಪಟ್ಟಿದೆ.

ಏಳು ಮಾದರಿಗಳನ್ನು (ನಾಲ್ಕು ಹುಲಿ ಮತ್ತು ಮೂರು ಸಿಂಹಗಳು) ಉತ್ತರ ಪ್ರದೇಶದ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಪೈಕಿ ಒಂದು ಸಿಂಹಿಣಿಗೆ ಸಾರ್ಸ್ ಕೋವ್-2 ಮತ್ತು  ಡಿಸ್ಪೆಂಪರ್ ವೈರಸ್ ನಿಂದ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. 

ಮತ್ತೊಂದು ಸಿಂಹಿಣಿಯಲ್ಲಿ ಸಾರ್ಸ್ ಕೋವ್-2 ಮತ್ತು ಒಂದು ಸಿಂಹದಲ್ಲಿ ಡಿಸ್ಟೆಂಪರ್ ವೈರಸ್ ಪತ್ತೆಯಾಗಿರುವುದಾಗಿ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಕೆ. ಪಿ. ಸಿಂಗ್ ತಿಳಿಸಿದ್ದಾರೆ. ಆದರೆ, ನಾಲ್ಕು ಹುಲಿಗಳ ಮಾದರಿಗಳಲ್ಲಿ ಎರಡು ವೈರಸ್ ಗಳ ನೆಗೆಟಿವ್ ವರದಿ ಬಂದಿದೆ.

ಈವರೆಗೂ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹುಲಿಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೆ, ಸಿಂಹಗಳ ಮಾದರಿ ವರದಿಯನ್ನು ಇನ್ನೂ ಕಾಯಲಾಗುತ್ತಿದೆ ಎಂದು ವಂಡಲೂರು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.