ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಸಾಫ್ಟ್ ವೇರ್ ಉದ್ಯೋಗಿ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆ
ಕೆಲಸ ಕಳೆದುಕೊಂಡ ನಂತರ ಸ್ವಾತಿ ಅವರು ಮನೆಯಲ್ಲೇ ಇದ್ದರು. ಪತಿ ಸಾಯಿಕುಮಾರ್ ಕಡಿಮೆ ಸಂಬಳಕ್ಕೆ ಕಾಲ್ ಸೆಂಟರ್ ಸೇರಿಕೊಂಡಿದ್ದರು.

ಹೈದರಾಬಾದ್: 32 ವರ್ಷದ ಸಾಫ್ಟ್ ವೇರ್ ಉದ್ಯೋಗಿ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಬೇಸತ್ತು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಕೊಂದು ತಾವು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಸ್ವಾರ್ತಿ ಕುಸುಮಾ ಮತ್ತು ಪತಿ ಸಾಯಿಕುಮಾರ್ ಇಬ್ಬರೂ ಕೊರೊನಾ ಸಮಯದಲ್ಲಿ ಸಾಫ್ಟ್ ವೇರ್ ಉದ್ಯೋಗ ಕಳೆದುಕೊಂಡಿದ್ದರು. ಕೆಲಸ ಕಳೆದುಕೊಂಡ ನಂತರ ಸಾಯಿಕುಮಾರ್ ಕಾಲ್ ಸೆಂಟರ್ ನಲ್ಲಿ ಕಡಿಮೆ ಸಂಬಳಕ್ಕೆ ಸೇರಿಕೊಂಡಿದ್ದರು. ಸ್ವಾತಿ ಅವರು ಮನೆಯಲ್ಲೇ ಇದ್ದರು.
ಪತಿ ಸಾಯಿಕುಮಾರ್ ಗೆ ಬರುತ್ತಿದ್ದ ಸಂಬಳ ಮಕ್ಕಳ ಫೀಸಿಗೂ ಸಾಕಾಗುತ್ತಿಲ್ಲವೆಂದು ಸ್ವಾತಿ ಚಿಂತಿತರಾಗಿದ್ದರು ಎನ್ನಲಾಗಿದೆ. ಸಾಯಿಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ ಬೆಡ್ ರೂಮಿನಲ್ಲಿ ಆತ್ಮಹತ್ಯೆ ನೋಟ್ ಬರೆದು ಸ್ವಾತಿ 5 ವರ್ಷದ ಮಗ ಮಗು 3 ವರ್ಷದ ಮಗಳನ್ನು ಕೊಂದು ತಾವೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


