ದೇಶ

ಮೇಘಾಲಯ: ಮಧ್ಯರಾತ್ರಿ ನದಿಗೆ ಬಿದ್ದ ಬಸ್, ಆರು ಪ್ರಯಾಣಿಕರು ಸಾವು, ಗಾಯಗೊಂಡವರು ಆಸ್ಪತ್ರೆಗೆ ದಾಖಲು  

ಮೇಘಾಲಯದ ಶಿಲ್ಲಾಂಗ್​​ನ ನೊಂಗ್ಚ್ರಮ್ ಎಂಬಲ್ಲಿ ಬಸ್​​ ರಿಂಗ್ಡಿ ನದಿಗೆ ಬಿದ್ದು ಆರು ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ​ ತುರಾದಿಂದ ಶಿಲ್ಲಾಂಗ್​​ಗೆ ಹೋಗುತ್ತಿತ್ತು. ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್ ಬಳಿ ರಿಂಗ್ಡಿ ನದಿಗೆ ಬಿದ್ದಿದೆ.

ಮೇಘಾಲಯ: ಮಧ್ಯರಾತ್ರಿ ನದಿಗೆ ಬಿದ್ದ ಬಸ್, ಆರು ಪ್ರಯಾಣಿಕರು ಸಾವು, ಗಾಯಗೊಂಡವರು ಆಸ್ಪತ್ರೆಗೆ ದಾಖಲು  
ನದಿಗೆ ಬಿದ್ದ ಬಸ್ಸು
Published On :

ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್​​ನ ನೊಂಗ್ಚ್ರಮ್ ಎಂಬಲ್ಲಿ ಬಸ್​​ ರಿಂಗ್ಡಿ ನದಿಗೆ ಬಿದ್ದು ಆರು ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ​ ತುರಾದಿಂದ ಶಿಲ್ಲಾಂಗ್​​ಗೆ ಹೋಗುತ್ತಿತ್ತು. ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್  ಬಳಿ ರಿಂಗ್ಡಿ ನದಿಗೆ ಬಿದ್ದಿದೆ. 

ನಾಲ್ವರು ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನು ಇಬ್ಬರ ಮೃತದೇಹ ಬಸ್ಸಿನೊಳಗೆ ಸಿಕ್ಕಿಹಾಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್​ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಗೆ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೆ 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬಸ್​​ನಲ್ಲಿ ಚಾಲಕ ಸೇರಿ ಒಟ್ಟು 22 ಮಂದಿ ಇದ್ದರು. ಬಸ್ ಚಾಲಕ ಮೃತಪಟ್ಟಿದ್ದಾಗಿ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೇಗವಾಗಿ ಸಾಗುತ್ತಿದ್ದ ಬಸ್ಸಿನ ಮುಂದಿನ ಭಾಗ ಸೇತುವೆ ಪೋಸ್ಟ್ ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.