ದೇಶ

ಆನ್ ಲೈನ್ ಫುಡ್ ಡೆಲರಿ ಸಮವಸ್ತ್ರ ಧರಿಸಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಿಂದ 4 ಲಕ್ಷ ಹಗಲು ದರೋಡೆ!

ಆನ್ ಲೈನ್ ಫುಡ್ ಡೆಲಿವರಿ ಸಮವಸ್ತ್ರ ಧರಿಸಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲೆ ನಡೆಸಿ 4 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಆನ್ ಲೈನ್ ಫುಡ್ ಡೆಲರಿ ಸಮವಸ್ತ್ರ ಧರಿಸಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಿಂದ 4 ಲಕ್ಷ ಹಗಲು ದರೋಡೆ!
ದರೋಡೆ (ಸಾಂಕೇತಿಕ ಚಿತ್ರ)
Published On :

ಮಂಗಳೂರು: ಆನ್ ಲೈನ್ ಫುಡ್ ಡೆಲಿವರಿ ಸಮವಸ್ತ್ರ ಧರಿಸಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲೆ ನಡೆಸಿ 4 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 

ಸೆ.28 ರಂದು ಮಧ್ಯಾಹ್ನ 12:30 ರ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ (57) ಗಾಂಧಿನಗರದಿಂದ ಬ್ಯಾಂಕ್ ನಲ್ಲಿ ಹಣ ಜಮಾವಣೆ ಮಾಡುವುದಕ್ಕಾಗಿ ನಗರ ಪ್ರದೇಶಕ್ಕೆ ತೆರಳುತ್ತಿದ್ದರು.

ಭೋಜಪ್ಪ ಯು-ಟರ್ನ್ ಮಾಡುತ್ತಿದ್ದಾಗ ಆನ್ ಲೈನ್ ಫುಡ್ ಡೆಲಿವರಿ ಸಮವಸ್ತ್ರ ಧರಿಸಿದ್ದ ಇಬ್ಬರು ವ್ಯಕ್ತಿಗಳು ಮ್ಯಾನೇಜರ್ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿ ನಗದು ಜೊತೆಗೆ ಪರಾರಿಯಾಗಿದ್ದಾರೆ.

ಭೋಜಪ್ಪಾಗೆ ತಲೆ ಮತ್ತು ಭುಜಕ್ಕೆ ಗಾಯಗಳಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ ದರೋಡೆಕೋರರು ಪೆಟ್ರೋಲ್ ಬಂಕ್ ನ ಮ್ಯಾನೇಜರ್ ನ ಚಲನವಲನಗಳನ್ನು ಗಮನಿಸಿ ಹೊಂಚು ಹಾಕಿದ್ದರು ಎಂದು ತಿಳಿದುಬಂದಿದೆ. ಉರ್ವಾ ಠಾಣೆಯ ಪೊಲೀಸರು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.