ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು, 165 ಸಾವು
ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 165 ಮಂದಿ ಒಂದೇ ದಿನ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ.

ತಿರುವನಂತಪುರಂ: ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 165 ಮಂದಿ ಒಂದೇ ದಿನ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ.
ಶನಿವಾರದಂದು 17,658 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಕೇರಳದಲ್ಲಿ ಈ ವರೆಗೂ 44,41,430 ಮಂದಿ ಚೇತರಿಸಿಕೊಂಡಿದ್ದರೆ, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,63,280ಗೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,03,484 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕೇರಳದಲ್ಲಿ ಎರ್ನಾಕುಲಮ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು (2,572) ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ತಿರುವನಂತಪುರಂ-1,861 ಪ್ರಕರಣ, ತ್ರಿಶೂರ್-1,855 ಪ್ರಕರಣ, ಕೊಟ್ಟಾಯಂ-1,486 ಪ್ರಕರಣ, ಕೋಯಿಕ್ಕೋಡ್ 1,379 ಪ್ರಕರಣ, ಮಳಪ್ಪುರಂ ನಲ್ಲಿ 1,211 ಪ್ರಕರಣ, ಪಾಲಕ್ಕಾಡ್ ನಲ್ಲಿ 1,008 ಪ್ರಕರಣ ಅಲಪ್ಪುಳ-985, ಕೊಲ್ಲಂ ನಲ್ಲಿ 954 ಪ್ರಕರಣಗಳು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


