ರಾಮ, ಕೃಷ್ಣ, ಶಿವ ಮುಸ್ಲಿಮರ ಪೂರ್ವಜರು; ಅವರು 'ಭಾರತೀಯ ಸಂಸ್ಕೃತಿ'ಗೆ ತಲೆಬಾಗಲೇಬೇಕು: ಉತ್ತರ ಪ್ರದೇಶ ಸಚಿವ
ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು,ಹೀಗಾಗಿ ಅವರು ಭಾರತೀಯ ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಉತ್ತರ ಪ್ರದೇಶ ಸಚಿವ ಆನಂದ ಸ್ವರೂಪ್ ಶುಕ್ಲಾ ಹೇಳಿದ್ದಾರೆ.

ಬಲ್ಲಿಯಾ: ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು,ಹೀಗಾಗಿ ಅವರು ಭಾರತೀಯ ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಉತ್ತರ ಪ್ರದೇಶ ಸಚಿವ ಆನಂದ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದುತ್ವ ಮತ್ತು "ಭಾರತೀಯ ಸಂಸ್ಕೃತಿ" ಯ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯವನ್ನು ರಚಿಸುವ ಉದ್ದೇಶವನ್ನು ತಡೆ ಹಿಡಿದಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಭಾರತದ ಮುಸ್ಲಿಮರ ಪೂರ್ವಜರು ರಾಮ, ಕೃಷ್ಣ ಮತ್ತು ಶಂಕರ (ಶಿವ). ಹೀಗಾಗಿ ಕಾಬಾ ಭೂಮಿಯನ್ನು ನೋಡುವ ಅಗತ್ಯವಿಲ್ಲ. ಮುಸ್ಲಿಮರು ಭಾರತದ ಭೂಮಿ ಮತ್ತು ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ, ಕಳೆದ ನಾಲ್ಕೂವರೆ ವರ್ಷಗಳ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಾಧನೆ ಕುರಿತು ವಿವರವಾದ ಮಾಹಿತಿ ನೀಡಿದರು.
ಸಿರಿಯಾ ಮತ್ತು ಅಫ್ಘಾನಿಸ್ತಾನದ ನಂತರ, ವಿವಿಧ ದೇಶಗಳ ಕೆಲವು ಜನರು ಜಗತ್ತನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಬಯಸುತ್ತಿದ್ದಾರೆ ಭಾರತದಲ್ಲಿ ಕೆಲವರಿಗೆ ಈ ಮನಸ್ಥಿತಿ ಇದೆ. ಪಿಎಂ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅರು ಹಿಂದುತ್ವ ಬಾವುಟ ಹಾರಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಕಾಪಾಡುತ್ತಿದ್ದಾರೆ ಎಂದು ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


