ಮಹಾನದಿ ಪ್ರವಾಹದಲ್ಲಿ ಸಿಕ್ಕಿ ನಿಂತ ಕಾಡಾನೆ: ಕಾರ್ಯಾಚರಣೆ ವೇಳೆ ಮುಗುಚಿದ ರಕ್ಷಣಾ ಪಡೆ ಬೋಟ್!
ನೀರಿನ ಆವೇಗದಿಂದಾಗಿ ಮುಂದೆ ಹೋಗಲು ಸಾಧ್ಯವಾಗದೆ ಸುಮಾರು ನಾಲ್ಕು ಗಂಟೆಗಳಿಂದ ಮಹಾನದಿಯಲ್ಲಿ ಸಿಲುಕಿರುವ ಕಾಡಾನೆಯೊಂದರ ರಕ್ಷಣಾ ಕಾರ್ಯಾಚರಣೆಗೆ ರಕ್ಷಣಾ ತಂಡಗಳು ಸಿದ್ಧವಾಗಿ ನಿಂತಿವೆ.

ಭುವನೇಶ್ವರ: ನೀರಿನ ಆವೇಗದಿಂದಾಗಿ ಮುಂದೆ ಹೋಗಲು ಸಾಧ್ಯವಾಗದೆ ಸುಮಾರು ನಾಲ್ಕು ಗಂಟೆಗಳಿಂದ ಮಹಾನದಿಯಲ್ಲಿ ಸಿಲುಕಿರುವ ಕಾಡಾನೆಯೊಂದರ ರಕ್ಷಣಾ ಕಾರ್ಯಾಚರಣೆಗೆ ರಕ್ಷಣಾ ತಂಡಗಳು ಸಿದ್ಧವಾಗಿ ನಿಂತಿವೆ.
ಕಟಕ್‌ನ ಸೇತುವೆಯ ಬಳಿ ರಕ್ಷಣಾ ಕಾರ್ಯಾಚರಣೆಗೆ ಒಡಿಶಾದಲ್ಲಿ ಅರಣ್ಯ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಆದರೆ ಆನೆಗಳು ಉತ್ತಮ ಈಜುಗಾರರಾಗಿರುವುದರಿಂದ ಉಪ-ವಯಸ್ಕ ಆನೆಯು ತಾನಾಗಿಯೇ ನದಿಯನ್ನು ದಾಟುತ್ತದೆ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ಆನೆ ಅಲ್ಲಿಂದ ಹೋಗಿದ್ದರೆ ರಕ್ಷಣಾ ಕಾರ್ಯಾಚರಣೆ ಮಾಡಿ ರಕ್ಷಿಸುತ್ತೇವೆ ಎಂದು ಚಂದಕ ಡಿಎಫ್‌ಒ ಎಂಡಿ ಜಮೀಲ್ ಹೇಳಿದ್ದಾರೆ.
ಅಂಡಘರ್ ಅರಣ್ಯ ಪ್ರದೇಶದಿಂದ ಏಳು ಆನೆಗಳ ಹಿಂಡು ಈಜಿಕೊಂಡು ನದಿಯನ್ನು ದಾಟಿ ಚಂದಕಕ್ಕೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಆರು ನದಿ ದಾಟುವಲ್ಲಿ ಯಶಸ್ವಿಯಾದರೆ, ಒಂದು ಉಪ-ವಯಸ್ಕ ಆನೆಯು ನದಿಯ ಬಲವಾದ ಪ್ರವಾಹದಲ್ಲಿ ಸಿಲುಕಿಕೊಂಡಿತ್ತು ಎಂದು ಅವರು ಹೇಳಿದರು.

ಮುಂಡುಲಿ ಸೇತುವೆ ಕಟಕ್ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಇನ್ನು ನದಿ ಪ್ರವಾಹಕ್ಕೆ ನಿಲುಕಿರುವ ಆನೆಯನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ನಮ್ಮ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಅಗತ್ಯವಿದ್ದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಾಗಿವೆ. ಇನ್ನು ಆನೆ ಮುಂದಕ್ಕೆ ಸಾಗಲು ಅನುಕೂಲವಾಗುವಂತೆ ಅಗ್ನಿಶಾಮಕ ಸಿಬ್ಬಂದಿ ತಂಡವು ಬೋಟ್ ಅನ್ನು ನೀರಿಗೆ ಅಡ್ಡಲಾಗಿ ಇಡಲು ಪ್ರಯತ್ನಿಸಿದರು ಆದರೆ ಬೋಟ್ ಮುಗುಚಿತ್ತು ಎಂದು ಹೇಳಿದರು.
ಕಳೆದ ವರ್ಷದಲ್ಲಿ ಇದೇ ರೀತಿಯ ಘಟನೆಯಲ್ಲಿ, 18ರಿಂದ 20 ಆನೆಗಳ ಹಿಂಡು ಕೂಡ ಹೆಚ್ಚಿನ ನೀರಿನಿಂದಾಗಿ ಕಟಕ್‌ನ ದಾಸ್‌ಪುರ್ ಘಾಟಾದ ಮಹಾನದಿ ನದಿಯ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಆದಾಗ್ಯೂ, ನೀರಿನ ಮಟ್ಟ ಇಳಿದ ನಂತರ ಅವು ನದಿಯನ್ನು ದಾಟಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


