ಲಾಕ್ ಡೌನ್ ನಂತರ ಚೆನ್ನೈ ಫೋರೆನ್ಸಿಕ್ ಲ್ಯಾಬ್ ನಲ್ಲಿ ಪೋಸ್ಕೋ ಪ್ರಕರಣಗಳ ದಾಖಲಾತಿಯಲ್ಲಿ 3 ಪಟ್ಟು ಹೆಚ್ಚಳ!
ಲಾಕ್ ಡೌನ್ ನಂತರದ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಚೆನ್ನೈ ನ ಫೋರೆನ್ಸಿಕ್ ಪ್ರಯೋಗಾಲಯದಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣಗಳು ವರದಿಯಾಗುವುದು ಮೂರು ಪಟ್ಟು ಹೆಚ್ಚಳವಾಗಿದೆ.

ಚೆನ್ನೈ: ಲಾಕ್ ಡೌನ್ ನಂತರದ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಚೆನ್ನೈ ನ ಫೋರೆನ್ಸಿಕ್ ಪ್ರಯೋಗಾಲಯದಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣಗಳು ವರದಿಯಾಗುವುದು ಮೂರು ಪಟ್ಟು ಹೆಚ್ಚಳವಾಗಿದೆ.
ಕೊರೋನಾ, ಲಾಕ್ ಡೌನ್ ಗಿಂತಲೂ ಮುನ್ನ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯೊಂದಿಗೆ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಸಂಖ್ಯೆಯನ್ನು ಹೋಲಿಕೆ ಮಾಡಲಾಗಿದೆ.
ಐಎಎನ್ಎಸ್ ಜೊತೆ ಮಾತನಾಡಿರುವ ಚೆನ್ನೈ ನ ವಿಧಿವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಯೊಬ್ಬರು, ಲಾಕ್ ಡೌನ್ ನಂತರದ ದಿನಗಳಲ್ಲಿ ಪೋಸ್ಕೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ ಎಂಬ ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ಗಿಂತಲೂ ಮುನ್ನ ಮಕ್ಕಳು ಹಾಗೂ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯಗಳ 15 ಪ್ರಕರಣಗಳು ಪ್ರತಿ ತಿಂಗಳು ವರದಿಯಾಗುತ್ತಿತ್ತು. ಈಗ ಲಾಕ್ ಡೌನ್ ನಂತರದಲ್ಲಿ ಈ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.
ಚೆನ್ನೈ ನ ಪ್ರಯೋಗಾಲಯದಲ್ಲಿ, ಅಧಿಕಾರಿಗಳ ಮಾಹಿತಿಯ ಪ್ರಕಾರ ಹಾಳಾದ ಮೊಬೈಲ್ ಫೋನ್ ಗಳಿಂದಲೂ ಡೇಟಾವನ್ನು ವಾಪಸ್ ಪಡೆಯುವ ಯುನಿವರ್ಸಲ್ ಫೋರೆನ್ಸಿಕ್ ಎಕ್ಸ್ಟ್ರಾಕ್ಷನ್ ಸಾಧನ (UFED)ವನ್ನು ಈ ಪ್ರಯೋಗಾಲಯ ಹೊಂದಿದೆ.
"ತಮಿಳುನಾಡಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಪೋಸ್ಕೋ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಅಪರಾಧಕೃತ್ಯಗಳ ಬಗ್ಗೆ ಮಾತನಾಡಿದ್ದು, ದೌರ್ಜನ್ಯ ಎಸಗುವವರು ನಿಂದನಾತ್ಮಕ ಮೆಸೇಜ್ ಗಳು ಹಾಗೂ ಸಂತ್ರಸ್ತರಿಗೆ ಕಳಿಸುತ್ತಿದ್ದ ನಗ್ನ ಫೋಟೋಗಳನ್ನು ಡಿಲೀಟ್ ಮಾಡುತ್ತಿದ್ದರು. ಆದರೆ ಯುಎಫ್ಇಡಿ ಟೆಕ್ನಾಲಜಿಯ ಸಹಾಯದಿಂದ ಅವುಗಳನ್ನು ಮರಳಿ ಪಡೆದಿದ್ದೇವೆ ಈ ಮೂಲಕ ಬಹುತೇಕ ಆರೋಪಿಗಳಿಗೆ ಶಿಕ್ಷೆಯೂ ಆಗಿದೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


