ದೇಶ

ಶಾಲಾ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಶಿಕ್ಷಕ ಪೊಲೀಸರಿಗೆ ಶರಣು ಇನ್ ಸ್ಟಾಗ್ರಾಂನಲ್ಲಿ ಸಿಕ್ಕ ಅನೈತಿಕ ಸಾಕ್ಷ್ಯ

ಶಿಕ್ಷಕ ಉಸ್ಮಾನ್ ಮೃತ ಶಾಲಾ ಬಾಲಕಿ ಜೊತೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಆತ ಸ ಅದಿಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತಿದ್ದ. ಆತ ಮತ್ತು ಮೃತ ಶಾಲ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು.

ಶಾಲಾ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಶಿಕ್ಷಕ ಪೊಲೀಸರಿಗೆ ಶರಣು ಇನ್ ಸ್ಟಾಗ್ರಾಂನಲ್ಲಿ ಸಿಕ್ಕ ಅನೈತಿಕ ಸಾಕ್ಷ್ಯ
ಸಾಂದರ್ಭಿಕ ಚಿತ್ರ
Published On :

ಕಾಸರಗೋಡು: ಕಾಸರಗೋಡಿನ ಮೆಲ್ ಪರಂಬಾ ಎಂಬಲ್ಲಿ 13 ವರ್ಷದ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾಗಿ ಶಿಕ್ಷನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಶಿಕ್ಷಕ ಉಸ್ಮಾನ್ ಇದೀಗ ಪೊಲೀಸರಿಗೆ ಶರಣಾಗಿದ್ದಾನೆ.

ಶಿಕ್ಷಕ ಉಸ್ಮಾನ್ ಮೃತ ಶಾಲಾ ಬಾಲಕಿ ಜೊತೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಆತ ಸ ಅದಿಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತಿದ್ದ. ಆತ ಮತ್ತು ಮೃತ ಶಾಲ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು. 

೮ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸೆ.7ರಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಂತರ ಬಾಲಕಿ ತಂದೆ ತಮ್ಮ ಮಗಳ ಜೊತೆ ಉಸ್ಮಾನ್ ಅನೈತಿಕವಾಗಿ ಚ್ಯಾಟ್ ಮಾಡಿದ್ದಾಗಿ ಆರೋಪಿಸಿದ್ದರು.

ಬಾಲಕಿಯ ಇನ್ ಸ್ಟಾಗ್ರಾಂ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಆಕೆ ಉಸ್ಮಾನ್ ಜೊತೆ ಚ್ಯಾಟ್ ಮಾಡಿರುವುದು ತಿಳಿದುಬಂದಿತ್ತು. ಆರೋಪಿ ಮೇಲೆ ಲೈಂಗಿಕ ದೌರ್ಜನ್ಯ, ಆತ್ಮಹತ್ಯೆಗೆ ಪ್ರಚೋದನೆ ಮುಂತಾದ ಪ್ರಕರಣ ದಾಖಲಿಸಿಕೊಳ್ಲಲಾಗಿದೆ. ಆರೋಪಿ ಪರ ವಕೀಲರು ಉಸ್ಮಾನ್ ಆ ಬಾಲಕಿಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ, ಆಕೆಗೆ ಪಾಠ ಮಾಡಿಲ್ಲ ಎಂದು ಹೇಳಿದ್ದಾರೆ.

Related Article

ದಾವಣಗೆರೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಛತ್ತೀಸ್‌ಗಢ: ಮಾಜಿ ಸಚಿವ ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ಆತ್ಮಹತ್ಯೆ; ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ

ಭಟ್ಕಳ: ಸಮುದ್ರ ಕಿನಾರೆಯಲ್ಲಿ ತಾಯಿ, ಮಗನ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ

ಐವರು ಆತ್ಮಹತ್ಯೆ ಪ್ರಕರಣ: ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಚಿನ್ನಾಭರಣ ಪತ್ತೆ!

ನೀಟ್ ಕೋಚಿಂಗ್ ಸೆಂಟರ್ ನಡೆಸಿದ್ದ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ವಿಫಲ; ವಿದ್ಯಾರ್ಥಿ ಆತ್ಮಹತ್ಯೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.