ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದ ತಿಂಗಳಿಗೆ 1,000- 1,500 ಕೋಟಿ ಆದಾಯ: ನಿತಿನ್ ಗಡ್ಕರಿ
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 2023ರಿಂದ ಸಾರ್ವಜನಿಕ ಬಳಕೆಗೆ ಸಿದ್ಧಗೊಳ್ಳಲಿರುವ ಈ ಎಕ್ಸ್ ಪ್ರೆಸ್ ಹೈವೇ ಸರ್ಕಾರದ ಪಾಲಿಗೆ ಚಿನ್ನದ ಗಣಿ ಎಂದು ನಿತಿನ್ ಗಡ್ಕರಿ ಹೋಲಿಕೆ ಮಾಡಿದ್ದಾರೆ.

ನವದೆಹಲಿ: ಕಾಮಗಾರಿ ಪೂರ್ಣಗೊಂಡ ನಂತರ ಮಹತ್ವಾಕಾಂಕ್ಷಿ ಯೋಜನೆಯಾದ ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದ ಸರ್ಕಾರದ ಬೊಕ್ಕಸಕ್ಕೆ 1,000- 1,500 ಕೋಟಿ ರೂ. ಆದಾಯ ಸೇರ್ಪಡೆಗೊಳ್ಲಲಿದೆೆಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 2023ರಿಂದ ಸಾರ್ವಜನಿಕ ಬಳಕೆಗೆ ಸಿದ್ಧಗೊಳ್ಳಲಿರುವ ಈ ಎಕ್ಸ್ ಪ್ರೆಸ್ ಹೈವೇ ಸರ್ಕಾರದ ಪಾಲಿಗೆ ಚಿನ್ನದ ಗಣಿ ಎಂದು ಹೋಲಿಕೆ ಮಾಡಿದ್ದಾರೆ.
ಸದ್ಯ ದೇಶಾದ್ಯಂತ ನಡೆಯುತ್ತಿರುವ ರಸ್ತೆ ಸೌಕರ್ಯ ಅಭಿವೃದ್ಧಿ ಯೋಜನೆಗಳಿಂದಾಗಿ ಮುಂದಿನ ೫ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಗಳಿಂದ ವಾರ್ಷಿಕ 1.40 ಲಕ್ಷ ಕೋಟಿ ಆದಾಯ ನಿರೀಕ್ಷಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ. ಸದ್ಯ ಟೋಲ್ ಗಳಿಂದ ಸಂಗ್ರಹವಾಗುತ್ತಿರುವ ಮೊತ್ತ 40,000 ಕೋಟಿ ರೂ.
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 4 ರಾಜ್ಯಗಳನ್ನು ಹಾದುಹೋಗುತ್ತಿದೆ. ವಿಶ್ವದಲ್ಲೇ ಅತಿದೊಡ್ಡ ರಸ್ತೆ ನಿರ್ಮಾಣ ಕಾಮಗಾರಿ ಎನ್ನುವ ಹೆಸರಿಗೆ ಅದು ಪಾತ್ರವಾಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Related Article
ಮುಖ್ಯಮಂತ್ರಿಗಳಿಗೆ ತಾವು ಎಷ್ಟು ದಿನ ಅಧಿಕಾರದಲ್ಲಿರ್ತೀವಿ ಅನ್ನೋದು ಗೊತ್ತಿಲ್ಲ: ಗಡ್ಕರಿ
ಗಡ್ಕರಿ ಉತ್ತಮ ವ್ಯಕ್ತಿ. ಆದರೆ, ಅವರಿರುವ ಪಕ್ಷ ಸರಿಯಲ್ಲ: ಮಹಾರಾಷ್ಟ್ರ ಸಚಿವ ಅಶೋಕ್ ಚವಾಣ್
ರಸ್ತೆ ನಿರ್ಮಾಣಕ್ಕೆ 15 ಲಕ್ಷ ಕೋಟಿ ರೂಪಾಯಿ ವೆಚ್ಚ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ
ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಬೂತ್ ತೆರವು: ನಿತಿನ್ ಗಡ್ಕರಿ
ಹಳೆ ವಾಹನ ವಿಲೇವಾರಿ ನೀತಿ ಲೋಕಸಭೆಯಲ್ಲಿ ಘೋಷಿಸಿದ ನಿತಿನ್ ಗಡ್ಕರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


