ಮುಂಬೈ ನ ಶೇ.86 ರಷ್ಟು ಮಂದಿಯಲ್ಲಿ ಕೋವಿಡ್-19 ಪ್ರತಿಕಾಯ: ಸೆರೋ ಸಮೀಕ್ಷೆಯಲ್ಲಿ ಬಹಿರಂಗ
ಮುಂಬೈ ನ ಜನಸಂಖ್ಯೆಯ ಶೇ.86.64 ರಷ್ಟು ಮಂದಿಯಲ್ಲಿ ಕೋವಿಡ್-19 ವೈರಾಣು ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಸೆರೋ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಮುಂಬೈ: ಮುಂಬೈ ನ ಜನಸಂಖ್ಯೆಯ ಶೇ.86.64 ರಷ್ಟು ಮಂದಿಯಲ್ಲಿ ಕೋವಿಡ್-19 ವೈರಾಣು ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಸೆರೋ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಈ ಬಗ್ಗೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಈ ಅಂಕಿ-ಅಂಶಗಳನ್ನು ನೀಡಿದ್ದು, ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ 5 ನೇ ಬಾರಿಗೆ ನಡೆದಿರುವ ಸೆರೋ ಸಮೀಕ್ಷೆ ಇದಾಗಿದ್ದು, ಆ.12 ಹಾಗೂ ಸೆ.09 ರ ನಡುವೆ ನಡೆಸಲಾಗಿದೆ.
ಸ್ಲಮ್ ಗಳಲ್ಲಿ ಸೆರೋ ಪ್ರಿವೇಲೆನ್ಸ್ (ಪ್ರತಿಕಾಯಗಳ ಇರುವಿಕೆ) ಶೇ.87.02 ರಷ್ಟಿದ್ದು, ಬೇರೆ ಪ್ರದೇಶಗಳಲ್ಲಿ ಶೇ.86.22 ರಷ್ಟಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಕಳೆದ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಈ ಬಾರಿ ಗ್ರೇಟರ್ ಮುಂಬೈ ನಗರದ ಸ್ಲಮ್ ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿಕಾಯಗಳು ಹೆಚ್ಚಾಗಿದ್ದರೆ ಮುಂಬೈ ಐಲ್ಯಾಂಡ್ ಸಿಟಿ ಹಾಗೂ ಉಪನಗರಗಳಲ್ಲಿ ಮಹತ್ವದ ಬೆಳವಣಿಗೆಗಳು ಇಲ್ಲ ಎಂದು ಬಿಎಂಸಿ ಮಾಹಿತಿ ನೀಡಿದೆ.
ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದವರ ಪೈಕಿ ಶೇ.90.26 ರಷ್ಟು ಪ್ರತಿಕಾಯಗಳಿದ್ದರೆ, ಲಸಿಕೆ ಪಡೆಯದೇ ಇರುವ ಪ್ರದೇಶಗಳಲ್ಲಿ ಪ್ರತಿಕಾಯಗಳಿವೆ. ಮಹಿಳೆಯರಲ್ಲಿ ಶೇ.88.29 ರಷ್ಟು ಪ್ರತಿಕಾಯಗಳಿದ್ದರೆ, ಪುರುಷರಲ್ಲಿ ಶೇ.85.07 ರಷ್ಟು ಪ್ರತಿಕಾಯಗಳು ಪತ್ತೆಯಾಗಿವೆ. ಸಮೀಕ್ಷೆಗೊಳಪಟ್ಟ 8,674 ಮಾದರಿಗಳಲ್ಲಿ ಶೇ.20 ರಷ್ಟು ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


