ಗುಜರಾತ್ ತೀರದಲ್ಲಿ 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್ ವಶಕ್ಕೆ ಪಡೆದ ಇಂಡಿಯಾ ಕೋಸ್ಟ್ ಗಾರ್ಡ್!
ಗುಜರಾತ್ ಕರಾವಳಿಯಲ್ಲಿ 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ವಶಪಡಿಸಿಕೊಂಡಿದೆ.

ಅಹಮದಾಬಾದ್: ಗುಜರಾತ್ ಕರಾವಳಿಯಲ್ಲಿ 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ವಶಪಡಿಸಿಕೊಂಡಿದೆ.
ಐಸಿಜಿಯ ಕಣ್ಗಾವಲು ಪಡೆ ಮಂಗಳವಾರ ರಾತ್ರಿ ಪಾಕಿಸ್ತಾನದ ಬೋಟ್ ಅನ್ನು ಪ್ರತಿಕೂಲ ಹವಾಮಾನದ ನಡುವೆಯೂ ವಶಪಡಿಸಿಕೊಂಡಿದೆ.
ಸೆಪ್ಟೆಂಬರ್ 14ರ ರಾತ್ರಿ ಭಾರತೀಯ ಕೋಸ್ಟ್ ಗಾರ್ಡ್ ಹಡಗು 'ರಾಜರತನ್' ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದಾಗ 'ಅಲ್ಲಾ ಪವಕಲ್' ಹೆಸರಿನ ಪಾಕಿಸ್ತಾನದ ದೋಣಿ ಭಾರತೀಯ ಸಮುದ್ರದಲ್ಲಿ 12 ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆಯಲಾಯಿತು ಎಂದು ಐಸಿಜಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾಕ್ಕೆ ತರಲಾಯಿತು ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


