ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಯುವತಿ: ಕೊಚ್ಚಿ ನೌಕಾ ದಳ ಸಿಬ್ಬಂದಿಯಿಂದ ರಕ್ಷಣೆ
ಪೆಂಡುರುತಿ ಸೇತುವೆಯಿಂದ ಒಂದಷ್ಟು ದೂರದಲ್ಲಿ ನದಿ ಸಮುದ್ರವನ್ನು ಸೇರುತ್ತಲಿತ್ತು. ಯುವತಿ ನೀರಿನೊಂದಿಗೆ ಸಮುದ್ರದತ್ತ ಸಾಗುವುದನ್ನು ಕಂಡ ಇಬ್ಬರು ನೌಕಾದಳ ಸಿಬ್ಬಂದಿ ಒಡನೆಯೇ ನೀರಿಗೆ ಹಾರಿದ್ದರು.

ಕೊಚ್ಚಿ: ಕೊಚ್ಚಿ ನಿವಾಸಿ 26ರ ಹರೆಯದ ಅಕ್ಷಮಾ ಪ್ರದೀಪ್ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ನಗರದ ವೆಂಡುರುತಿ ಸೇತುವೆಯಿಂದ ಹಾರಿದ್ದಳು. ಇದು ಸೇತುವೆಯನ್ನು ಹಾದುಹೋಗುತ್ತಿದ್ದ ನೌಕಾದಳ ಗಸ್ತುಪಡೆಯ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿತ್ತು.
ಪೆಂಡುರುತಿ ಸೇತುವೆಯಿಂದ ಒಂದಷ್ಟು ದೂರದಲ್ಲಿ ನದಿ ಸಮುದ್ರವನ್ನು ಸೇರುತ್ತಲಿತ್ತು. ಯುವತಿ ನೀರಿನೊಂದಿಗೆ ಸಮುದ್ರದತ್ತ ಸಾಗುವುದನ್ನು ಕಂಡ ಇಬ್ಬರು ನೌಕಾದಳ ಸಿಬ್ಬಂದಿ ಒಡನೆಯೇ ಪ್ರಾಣದ ಹಂಗು ತೊರೆದು ನೀರಿಗೆ ಹಾರಿದ್ದರು.
ನೀರಿನ ಸೇಳೆತ ತೀವ್ರವಾಗಿದ್ದರೂ ಲೆಕ್ಕಿಸದೇ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಯುವತಿಯನ್ನು ನೌಕಾದಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.
Related Article
ಸೇಲಂ: ನೀಟ್ ಪರೀಕ್ಷೆಗೂ ಕೆಲವೇ ಗಂಟೆಗಳ ಮುನ್ನ ಆತ್ಮಹತ್ಯೆಗೆ ಶರಣಾದ 19 ವರ್ಷ ವಿದ್ಯಾರ್ಥಿ
ಶಿವಮೊಗ್ಗ: ಗಂಡನ ಸಾಲಕ್ಕೆ ಹೆದರಿ ಒಂದೇ ಸೀರೆಗೆ ಕೊರಳೊಡ್ಡಿ ತಾಯಿ-ಮಗಳು ಆತ್ಮಹತ್ಯೆ
ವಿಜಯಪುರ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಬಂಧಿತ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ
ಚಿಕ್ಕಮಗಳೂರು: ಅಕ್ರಮ-ಸಕ್ರಮ ಸಮಿತಿ ಸದಸ್ಯನ ಕಿರುಕುಳ ತಾಳಲಾರದೆ ರೆವಿನ್ಯೂ ಇನ್ಸ್ ಪೆಕ್ಟರ್ ಆತ್ಮಹತ್ಯೆ
ಪತ್ನಿ ವಿಯೋಗ ತಾಳಲಾರದೆ ಆಕೆಯ ಚಿತೆಗೆ ಹಾರಿ ಪತಿ ಆತ್ಮಹತ್ಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


