ಗೋಲ್ವಾಲ್ಕರ್, ಸಾರ್ವಕರ್ ಇತಿಹಾಸ ಪಠ್ಯದಲ್ಲಿದ್ದರೆ ತಪ್ಪೇನು: ಶಶಿ ತರೂರ್
ಹಿಂದೂ ಮಹಾಸಭಾ ನಾಯಕ ಡಿವಿ ಸಾವರ್ಕರ್ ಮತ್ತು ಆರ್‌ಎಸ್‌ಎಸ್ ನಾಯಕ ಎಂಎಸ್ ಗೋಲ್ವಾಲ್ಕರ್ ಅವರ ಪುಸ್ತಕವನ್ನು ಸ್ನಾತಕೋತ್ತರ ಪದವಿಯ ಆಡಳಿತ ಮತ್ತು ರಾಜಕೀಯ ಕೋರ್ಸ್ ನಲ್ಲಿ ಸೇರಿಸುವ ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ.

ತಿರುವನಂತಪುರ: ಹಿಂದೂ ಮಹಾಸಭಾ ನಾಯಕ ಡಿವಿ ಸಾವರ್ಕರ್ ಮತ್ತು ಆರ್‌ಎಸ್‌ಎಸ್ ನಾಯಕ ಎಂಎಸ್ ಗೋಲ್ವಾಲ್ಕರ್ ಅವರ ಪುಸ್ತಕವನ್ನು ಸ್ನಾತಕೋತ್ತರ ಪದವಿಯ ಆಡಳಿತ ಮತ್ತು ರಾಜಕೀಯ ಕೋರ್ಸ್ ನಲ್ಲಿ ಸೇರಿಸುವ ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ.
ನಮ್ಮ ಸಮಾಜದಲ್ಲಿ ಬೌದ್ಧಿಕ ಸ್ವಾತಂತ್ರ್ಯ ಅತ್ಯಂತ ಮಹತ್ವ ಪಡೆದಿದೆ. ಪಕ್ಷ ರಾಜಕೀಯ ಬಲಿ ನೀಡಲು ಬೌದ್ಧಿಕ ಸ್ವಾತಂತ್ರ್ಯ ತ್ಯಾಗ ಮಾಡಬಾರದು ಎಂದು ಶಶಿ ತತೂರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಗೋಲ್ವಾಲ್ಕರ್ ಮತ್ತು ಸಾರ್ವಕರ್ ಅವರ ಬಗ್ಗೆ ತಿಳಿದುಕೊಳ್ಳದೆ ಇದ್ದರೆ ಯಾವ ಅಂಶಗಳ ಆಧಾರದ ಮೇಲೆ ನಾವು ಅವರನ್ನು ವಿರೋಧಿಸಬೇಕು? ಕಣ್ಣೂರು ವಿಶ್ವವಿದ್ಯಾಲಯವು ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ವಿಷಯಗಳ ಬಗ್ಗೆಯೂ ಭೋದಿಸುತ್ತದೆ ಎಂದು ಹೇಳಿದ್ದಾರೆ.
ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಇದನ್ನು ವಿಶ್ವವಿದ್ಯಾಲಯದ ಕೇಸರೀಕರಣ ಎಂದು ಟೀಕಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


